ಬದಲಾಗಿದೆ ಸಮಯ, ಬದಲಾಗ್ತಿದೆ ಉದಯ”
ರಮೇಶ್ ಅರವಿಂದ, ಪ್ರಿಯಾಂಕ ಉಪೇಂದ್ರ, ಖುಷ್ಬೂ, ಅಜಯರಾವ್ ಮತ್ತು ರಿಷಿ ಸಾರಥ್ಯದಲ್ಲಿ
ಜೂನ್ 8ರಿಂದ ಕರುನಾಡ ಮನೆಮನಗಳಲ್ಲಿ
ಕನ್ನಡದ ಕಿರುತೆರೆಯ ಹಿರಿಯಣ್ಣ ಎಂದು ಖ್ಯಾತಿ ಪಡೆದಿರೋ ಉದಯ ಟಿವಿ ಕನ್ನಡಿಗರ ಮನಸಲ್ಲಿ ಮನರಂಜನೆಯ ಮಹಾಪೂರವನ್ನೆ ಹರಸಿದೆ. ಒಂದು ಸಣ್ಣ ಬ್ರೇಕ್ ನಂತರ ದುಪ್ಪಟ್ಟು ಮನರಂಜನೆಯ ದಾಪುಗಾಲು ಇಡಲು ಈಗ ಸಜ್ಜಾಗಿದೆ.
ಈ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳುವುದು ಬಹಳ ಪ್ರಾಮುಖ್ಯ. ಹಾಗೆ ಉನ್ನತ ಗುಟಮಟ್ಟದ ಕಾರ್ಯಕ್ರಮಗಳನ್ನು ನೀಡುವುದು ಅಷ್ಟೆ ಮುಖ್ಯ. ಈ ಹಿನ್ನಲೆಯಲ್ಲಿ ಉದಯ ಟಿವಿ ತಡವಾದರು ಉತ್ತಮ ಸಂಚಿಕೆ ಮತ್ತು ಕಥೆಗಳನ್ನು ನೀಡುವುದಕ್ಕಾಗಿ ಜೂನ್ 8ರಿಂದ ಪ್ರಸಾರವನ್ನು ಪ್ರಾರಂಭಿಸುತ್ತಿದೆ.
ಕಿರುತೆರೆ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಧಾರಾವಾಹಿಗಳ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಅದರಿಂದ ಉದಯ ಟಿವಿಯೂ ಹೊರತಾಗಿಲ್ಲ. ಲಾಕ್ಡೌನ್ ಬಳಿಕ “ಬದಲಾಗಿದೆ ಸಮಯ, ಬದಲಾಗ್ತಿದೆ ಉದಯ” ಎಂಬ ಶೀರ್ಷಿಕೆಯಡಿಯಲ್ಲಿ ಹೊಸ ಕಥೆ, ಹೊಸ ರೂಪ, ಹೊಸ ಪಾತ್ರಗಳು, ಹೊಸ ತಿರುವುಗಳ ಜೊತೆ ಹೊಸ ಸಂಚಿಕೆಗಳೊಂದಿಗೆ ಮರಳಿ ಕಳೆ ಕಟ್ಟುತ್ತಿದೆ ಉದಯ ಟಿವಿ. ಕುಟುಂಬ ಈಗ ದೊಡ್ಡದಾಗಿದೆ, ಹೊಸ ಸದಸ್ಯರು ಸೇರಿದ್ದಾರೆ, ಬೆಳ್ಳಿತೆರೆಯ ಬಹುದೊಡ್ಡ ತಾರಾಗಣವು ಇಲ್ಲಿ ಇನ್ನಷ್ಟು ಮೆರಗು ನೀಡಲು ಇದೇ ಜೂನ್ 8ರಿಂದ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಬೆಳ್ಳಿತೆರೆಯಲ್ಲಿ ತಮ್ಮ ನಟನೆಯಿಂದಲೆ ಛಾಪು ಮೂಡಿಸಿದ ನಟ ರಮೇಶ್ ಅರವಿಂದ್ ರವರು, ರಿಯಲ್ ಸ್ಟಾರ್ ನ ಮನದರಸಿ ಪ್ರಿಯಾಂಕ ಉಪೇಂದ್ರ, ಜನಪ್ರಿಯ ಬಹು ಭಾಷಾ ನಟಿ ಖುಷ್ಬೂ, ಸ್ಯಾಂಡಲ್‍ವುಡ್‍ನ ಕೃಷ್ಣ ಅಜಯ್ ರಾವ್, ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಇವರೆಲ್ಲಾ ಉದಯ ಟಿವಿಗೆ ಹೊಸತನವನ್ನು ನೀಡಲು ಬರಲಿದ್ದಾರೆ.
“ಅಲಾದ್ದಿನ್”
ಅದೊಂದು ಕಾಲ ಇತ್ತು ಅರೇಬಿಯನ್ ನೈಟ್ಸ್ ಸರಣಿಗಳೆಂದರೆ ಎಲ್ಲರಿಗೂ ಅಚ್ಚು ಮೆಚ್ಚು, ಈ ಸರಣಿಗಳಲ್ಲಿ ಮನಸೂರೆಗೊಂಡಿದ್ದು ಅಲಾದ್ದಿನ ಕಥೆ. ಈ ಮಾಯಾವಿ ಕಥೆ ಪುಸ್ತಕದ ಪುಟಗಳಿಂದ ಕಾರ್ಟೂನ್, ಕಾರ್ಟೂನ್ನಿಂದ ಸಿನಿಮಾಗಳಾಗಿದ್ದು ನೋಡಿದ್ದೀವಿ. ಜಾಫರ್ ನ ರಾಜತಂತ್ರಕ್ಕೆ ಪ್ರತಿಯಾಗಿ ಜೀನಿಯ ಮಾಯಾ ತಂತ್ರ, ಅಬೂವಿನ ತುಂಟಾಟದ ಜೊತೆಗೆ ಮಾಯಾಗಂಬಳಿಯ ಸಾಹಸ. ಜಾಸ್ಮೀನಳ ನಿಶ್ಕಲ್ಮಶ ಪ್ರೀತಿ, ಇವರೆಲ್ಲರ ಜೊತೆ ತನ್ನ ಕೈಚಳಕದ ಮೂಲಕ ಪ್ರೇಕ್ಷಕರ ಮನಸ್ಸನ್ನು ಕದಿಯಲು ಬರುತ್ತಿದ್ದಾನೆ ಅಲಾದ್ದಿನ್.
ಅದೇ ಅಲಾದ್ದಿನ್ ಅದ್ದೂರಿ ಸೆಟ್, ವಿಶ್ಯೂಲ್ ಬ್ಯೂಟಿ, ಹಲವಾರು ಸಾಹಸ ದೃಶ್ಯಗಳಿಂದ ಧಾರಾವಾಹಿ ರೂಪದಲ್ಲಿ ಉದಯ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 6ಕ್ಕೆ ಪ್ರಸಾರವಾಗಲಿದೆ.
“ಗಣೇಶ”
ಬ್ರಹ್ಮಾಂಡದಲ್ಲೇ ಪ್ರಥಮ ಪೂಜಿತ ಗಣೇಶ ಅಂದ್ರೆ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಇಷ್ಟ. ಬಾಲ ಗಣೇಶನ ತುಂಟಾಟ ಮತ್ತು ಮಹಿಮೆಗಳೂ ಬೇಕಾದಷ್ಟಿದೆ. ಈ ಕಥೆಗಳು ಸಿನಿಮಾಗಳ ಮೂಲಕ ಈಗಾಗಲೇ ನೋಡಿದ್ದೇವೆ. ಆದರೆ ಕಿರುತೆರೆಯಲ್ಲಿ ಕನ್ನಡದಲ್ಲಿ ಗಣೇಶನ ಪ್ರತಿಯೊಂದು ಸನ್ನಿವೇಷಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು, ಅತೀ ಸುಂದರವಾಗಿ ನಿಮ್ಮೆದುರು ಬರುತ್ತಿದೆ.
ವಿಘ್ನ ವಿನಾಶಕನ ಅಪರೂಪದ ಕಥೆಯು ‘ಗಣೇಶ’ ಧಾರಾವಾಹಿಯ ಮೂಲಕ ಅದ್ದೂರಿಯಾಗಿ ಸೋಮವಾರದಿಂದ ಶುಕ್ರವಾರ ಸಂಜೆ 6.30ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಕಸ್ತೂರಿ ನಿವಾಸದಲ್ಲಿ ಕೃಷ್ಣನ ಲೀಲೆ
ಹಳೆ ಆಚಾರ ಹೊಸ ವಿಚಾರಗಳ ಸಂಘರ್ಷದ ಕಥೆ ಕಸ್ತೂರಿ ನಿವಾಸ. ಸಂಪ್ರದಾಯ ಸಂಸ್ಕøತಿನೇ ಮುಖ್ಯ ಅನ್ನೋ ಪಾರ್ವತಿ, ಅವಳ ಸೊಸೆಯಾಗಿ ನೇರ ದಿಟ್ಟ ಮಾತಾಡೋ ಮೃದುಲಾ. ಅಮ್ಮನ ಮಮಕಾರ, ಪ್ರೀತಿಯ ಹೆಂಡತಿ ಇಬ್ಬರ ಮಧ್ಯ ಸಿಕ್ಕಿಹಾಕೊಂಡಿರೊ ರಾಘವನ ಕಥಾ ಹಂದರವೇ ಕಸ್ತೂರಿ ನಿವಾಸ.
ಈ ಬದಲಾವಣೆಯ ಹಾದಿಯಲ್ಲಿ, ಹೊಸ ರೂಪ ಪಡೀತಿದೆ. ತಂದೆಯನ್ನ ಕಳೆದುಕೊಂಡ ಮೃದುಲಾ ಬದುಕಲ್ಲಿ ಕರುಳ ಬಳ್ಳಿಯ ನಂಟು ಒದಗಿ ಬರ್ತಿದೆ. ಹೊಸ ಪಾತ್ರದ ಪ್ರವೇಶ ಆಗಲಿದೆ. ಅತ್ತೆ ಸೊಸೆ ಜಗಳಕ್ಕೆ ಹೊಸದೊಂದು ಟ್ವಿಸ್ಟ್ ಸಿಗುತ್ತದೆ. ಇದರ ಜೊತೆಗೆ ಕನ್ನಡದ ಖ್ಯಾತ ನಟ ಸ್ಯಾಂಡಲ್ ವುಡ್‍ನ ಕೃಷ್ಣ ಎಂದೇ ಪ್ರಸಿದ್ಧಿ ಪಡೆದಿರೋ “ಅಜಯ್ ರಾವ್” ಕಸ್ತೂರಿ ನಿವಾಸದಲ್ಲಿ ಸಂಬಂಧಗಳನ್ನ ಬೆಸೆಯೋಕೆ ಬರುತ್ತಿದ್ದಾರೆ.
ಕಸ್ತೂರಿನಿವಾಸ ಸೋಮವಾರದಿಂದ ಶುಕ್ರವಾರ ಸಂಜೆ 7ಕ್ಕೆ ಪ್ರಸಾರವಾಗಲಿದೆ.
‘ಸೇವಂತಿ” ಜೊತೆ “ಪ್ರಿಯಾಂಕ ಉಪೇಂದ್ರ”
ಸೇವಂತಿ ಧಾರಾವಾಹಿ ಮೂನ್ನೂರು ಸಂಚಿಕೆಗಳನ್ನು ದಾಟಿ ವೀಕ್ಷಕರ ಮನಗೆಲ್ಲುತ್ತಾ ಬಂದಿದೆ. ಸೇವಂತಿ ಧಾರಾವಾಹಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದ ವೀಕ್ಷಕರಿಗೆ ಈಗ ಇಲ್ಲಿದೆ ಸಿಹಿ ಸುದ್ದಿ. ವಿಶೇಷವಾಗಿ ಸೇವಂತಿ ಜೊತೆ ರಿಯಲ್ ಸ್ಟಾರ್ ಮನದರಸಿ “ಪ್ರಿಯಾಂಕ ಉಪೇಂದ್ರ” ಕಾಣಿಸಿಕೊಳ್ಳುತ್ತಿರುವುದು ವೀಕ್ಷಕರಿಗೂ ಹೊಸ ಉತ್ಸಾಹ ತುಂಬಲಿದೆ.
ಮೋಸಕ್ಕೆ ಒಳಗಾಗಿ ಜೈಲು ಸೇರಿರುವ ಸಾಕು ತಂದೆಯನ್ನು ಬಿಡಿಸುವ ಸಲುವಾಗಿ ಸೇವಂತಿ ಒಂದು ವರ್ಷದ ಒಪ್ಪಂದದ ಮೇರೆಗೆ ಲಾಯರ್ ಅರ್ಜುನ್‍ನನ್ನು ಗುಟ್ಟಾಗಿ ಮದುವೆಯಾಗಿರುವುದು. ಇವಾಗ ಇಬ್ಬರೂ ಮನಪೂರ್ವಕವಾಗಿ ಒಪ್ಪಿ ಒಂದಾಗಿದ್ದಾರೆ. ಆದರೆ ಖಳನಾಯಕಿ ಪ್ರಿಯಾ ಈಗಾಗಲೇ ಅರ್ಜುನ್ ತಮ್ಮ ಅಶ್ವಿನ್ ಮದುವೆಯಾದರೆÉ ತಾನು ಮಾಡಿರೋ ತಪ್ಪಿಗೆ ಶಿಕ್ಷೆ ಆಗುವುದಿಲ್ಲವೆಂದು ಪ್ಲಾನ್ ಮಾಡುತ್ತಾಳೆ. ಅಶ್ವಿನ್ ಮದುವೆಯ ವಿಷಯವಾಗಿ ಜೇನುಗೂಡಿನಂತಿದ್ದ ಮನೆಯಲ್ಲಿ ವೈಮನಸ್ಸು ಶುರುವಾಗುವುದು. ಈ ಎಲ್ಲಾ ಸಮಸ್ಯೆಗಳನ್ನ ಸೇವಂತಿ ಹೇಗೆ ಎದುರಿಸುತ್ತಾಳೆ? ಹಾಗೂ ಚಿತ್ರನಟಿ ಪ್ರಿಯಾಂಕ ಉಪೇಂದ್ರ ಅವರು ಸೇವಂತಿಗೆ ಈ ಸಮಯದಲ್ಲಿ ಯಾವ ರೀತಿ ಸಾಥ್ ನೀಡುತ್ತಾರೆಂಬ ಕುತೂಹಲಕಾರಿ ತಿರುವು ಇಲ್ಲಿದೆ.
ಸೇವಂತಿ ಹೊಸ ಹುರುಪಿನೊಂದಿಗೆ ಸೋಮವಾರದಿಂದ ಶುಕ್ರವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ.
“ಲಕ್ಷ್ಮೀ” ಯಾಗಿ ಖುಷ್ಬೂ
ಹಿರಿತೆರೆಯಿಂದ ಕಿರಿತೆರೆಗೆ ಬರುತ್ತಿರೋ ಹೃದಯ ಗೀತೆಯ ಹುಡುಗಿ ಖುಷ್ಬೂ ಸುಂದರ್. ಖುಷ್ಬುರವರು ಲಕ್ಷ್ಮೀ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಮತ್ತೊಮ್ಮೆ ಕಾಲಿಡುತ್ತಿದ್ದಾರೆ. ಮಧ್ಯಮ ವರ್ಗದ ಹೆಣ್ಣುಮಗಳು ತನಗೆ ಬಂದೊದಗುವ ಎಲ್ಲ ಸಂಕಷ್ಟಗಳನ್ನ ಎದುರಿಸಿ, ಸಮಾಜದಲ್ಲಿ ತನ್ನದೇ ಆದ ದೊಡ್ಡ ಜವಳಿ ಬ್ಯೂಸಿನೆಸ್ ಪ್ರಾರಂಭಿಸಿ, ತನ್ನ ಜವಳಿ ಮಳಿಗೆಯನ್ನು ದುಷ್ಟರಿಂದ ಉಳಿಸಿಕೊಳ್ಳಲು ದಿಟ್ಟತನದಿಂದ ಹೋರಾಡುವ ಮತ್ತು ಒಂದು ಸಂಸಾರದ ಹೊಣೆ ಹೊತ್ತು ಒಬ್ಬ ಮಾದರಿ ಹೆಣ್ಣಾಗಿ ನಿಲ್ಲುವ ಕಥೆಯೇ ಲಕ್ಷ್ಮೀ.
ಲಕ್ಷ್ಮೀ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.
“ನಂದಿನಿ” ಮುಖಾಂತರ ಧಾರಾವಹಿನಟನೆಗೆ ಕಾಲಿಟ್ಟ ಮಲ್ಟಿ ಟ್ಯಾಲೆಂಟೆಡ್ ನಟ “ರಮೇಶ ಅರವಿಂದ”
ಪ್ರಪ್ರಥಮ ಬಾರಿಗೆ ನಂದಿನಿ ಧಾರಾವಾಹಿಯ ಮೂಲಕ ಕಿರುತೆರೆಗೆ ಸ್ಪೆಶಲ್ ಎಂಟ್ರಿ ಕೊಡುತ್ತಿದ್ದಾರೆ ಮಲ್ಟಿ ಟ್ಯಾಲೆಂಟೆಡ್,ಸ್ಯಾಂಡಲ್‍ವುಡ್‍ನ ಹ್ಯಾಂಡ್ಸಮ್ ಹೀರೋ “ರಮೇಶ್ ಅರವಿಂದ್”. ನಾಗಲೋಕದ ಪಟ್ಟಕ್ಕಾಗಿ ನಡೀತಿರೊ ಈ ಕಾಳಗದಲ್ಲಿ ನಂದಿನಿ ನಾಗಕನ್ಯೆಯಾಗಿ ಬದಲಾಗುವ ಹಂತ ತಲುಪಿದೆ. ಈಗಾಗಲೆ ನೀಲಿ ಪಾತ್ರದಾರಿ ಸಾವನ್ನಪ್ಪಿದ್ದರೂ ಕುತೂಹಲಕಾರಿಯಾಗಿ ಎಂಟ್ರಿ ಕೊಡಲಿದ್ದಾಳೆ. ದುಷ್ಟಶಕ್ತಿಯ ಅಟ್ಟಹಾಸದ ನಡುವೆ, ಅಸಹಾಯಕಳಾದ ನಂದಿನಿ ಹೇಗೆ ಗೆಲುವು ಸಾಧಿಸಿ ಸಿಂಹಾಸನವನ್ನು ತನ್ನದಾಗಿಸಿಕೊಳ್ಳುತ್ತಾಳೆ ಎಂಬುದು ಮುಂದಿನ ಸಂಚಿಕೆಗಳಲ್ಲಿ ನೋಡಬಹುದಾಗಿದೆ.
ಹಲವಾರು ರೊಚಕ ತಿರುವು, ವಿಶೇಷ ಗ್ರಾಫಿಕ್ಸ್ ಹಾಗೂ ನಿಗೂಢವನ್ನೊಳಗೊಂಡು ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.
“ಮನಸಾರೆ”ಗೆ ಸಾಥ್ ನೀಡಲಿದ್ದಾರೆ “ರಿóಷಿ”
“ಅಪ್ಪಾ!…. ನಿನ್ ಪ್ರೀತೀನಾ ಪಡದೇ ಪಡಿತೀನಿ ಅಪ್ಪಾ” ಎಂದು ಮುದ್ದು ಮುಖದ ಚೆಲುವೆ ಪ್ರಾರ್ಥನಾ ದಿನಾ ರಾತ್ರಿ ಟಿವಿಯಲ್ಲಿ ಕಣ್ಣೀರಿಡ್ತಿದ್ರೆ ಮನೆಯಲ್ಲಿರುವ ಗೃಹಿಣಿಯರೂ ಸಹ ಕಣ್ಣೀರು ಹಾಕೋಕೆ ಶುರು ಮಾಡಿದ್ರು. ಉದಯ ಟಿವಿಯಲ್ಲಿ ಇತ್ತೀಚೆಗμÉ್ಟೀ ಆರಂಭವಾಗಿ ತನ್ನ ಕಥೆಯಿಂದಲೇ ಪ್ರೇಕ್ಷಕರ ಮನಗೆದ್ದು ಮನೆಮಾತಾದ ಧಾರಾವಾಹಿ ಮನಸಾರೆ. ಅಪ್ಪ-ಮಗಳ ಬಾಂಧವ್ಯದ ಸುತ್ತ ಹೆಣೆಯಲಾದ ಕಥೆಯಲ್ಲಿ ಮಲತಾಯಿಯ ನಿಷ್ಕಲ್ಮಶ ಪ್ರೀತಿ, ಅಕ್ಕ-ತಂಗಿಯರ ತರಲೆ ತುಂಟಾಟ, ನಾಯಕನ ಹುಡುಗಾಟ ಹೀಗೆ ಎಲ್ಲಾ ರೀತಿಯ ಸಂಬಂಧಗಳ ಭಾವೈಕ್ಯತೆಯ ಮಹಾಪೂರವೇ ಸೇರಿಕೊಂಡಿದೆ.
ಲಾಕ್ಡೌನ್ ಸಂಧರ್ಭದಲ್ಲಿ ಬಹುತೇಕ ಎಲ್ಲಾ ಕುಟುಂಬಗಳು ಯಾಂತ್ರಿಕ ಬದುಕಿನಿಂದ ಅಲ್ಪವಿರಾಮ ತೆಗೆದುಕೊಂಡು ತಮ್ಮವರೊಂದಿಗೆ ಸಮಯ ಕಳೆದು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿವೆ. ಇದೇ ನೈಜತೆಯನ್ನು ಕಥೆಯ ಜೀವಾಳವಾಗಿಸಿಕೊಂಡು ಮನಸಾರೆ ತಂಡ ಲಾಕ್ಡೌನ್ ಸ್ಟೋರಿಯನ್ನು ಹೇಳಲು ರೆಡಿಯಾಗಿದೆ.
ವಿಶೇಷವಾಗಿ ಬೆಳ್ಳಿ ಪರದೆ ಹಾಗೂ ಕಿರುತೆರೆಯಲ್ಲಿ ತನ್ನ ವಿಶಿಷ್ಟ ಪಾತ್ರಗಳ ಮೂಲಕವೇ ಹೆಸರು ಮಾಡಿರುವ “ರಿಷಿ” ಮನಸಾರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ತಿರೋ ಇವರು ಕಥೆಯಲ್ಲಿ ಏನೆಲ್ಲಾ ತಿರುವುಗಳನ್ನ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಹೊಸ ತಿರುವಿನೊಂದಿಗೆ ಹೊಸ ಅತಿಥಿಗಳೊಂದಿಗೆ ಮತ್ತೆ ಪಯಣ ಆರಂಭಿಸುತ್ತಿರುವ ಮನಸಾರೆ ಧಾರಾವಾಹಿ ಸೋಮವಾರದಿಂದ ಶುಕ್ರವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.
ಜೂನ್ 8ರಿಂದ ಉದಯ ವಾಹಿನಿ ಹೊಸ ಹುರುಪಿನೊಂದಿಗೆ ವೀಕ್ಷಕರನ್ನು ರಂಜಿಸಲು ಕರ್ನಾಟಕದ ವೀಕ್ಷಕರ ಮನೆ ಅಂಗಳದಲ್ಲಿ ಬರಲಿದೆ. 25ವರ್ಷಗಳಿಂದ ಜನರಿಂದ ಗೆದ್ದ ಪ್ರೀತಿ,ವಿಶ್ವಾಸ ಹಾರೈಕೆ ಈಗ ಮತ್ತಷ್ಟು ದ್ವಿಗುಣವಾಗಲಿದೆ ಎಂಬುದು ಉದಯ ಟಿವಿಯ ಆಶಯ.