ಉದಯ ಟಿವಿಯಲ್ಲಿ ಮೊಟ್ಟ ಮೊದಲ ಬಾರಿಗೆ “ಬಾಬು ಬಂಗಾರ” ಚಲನಚಿತ್ರ
ಭಾನುವಾರ (18.10.2020) ಸಂಜೆ 6.30ಕ್ಕೆ
“ಬಾಬು ಬಂಗರ” 2016 ರ ಆಕ್ಷನ್ ಮತ್ತು ಹಾಸ್ಯ ಚಿತ್ರವಾಗಿದ್ದು, ಎಸ್. ನಾಗಾ ವಂಶಿ, ಪಿ.ಡಿ.ವಿ.ಪ್ರಸಾದ್ ಅವರು ಸೀತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ನರ‍್ಮಿಸಿದ್ದಾರೆ. ಮಾರುತಿ ನರ‍್ದೇಶಿಸಿದ್ದಾರೆ. ವೆಂಕಟೇಶ್, ನಯನತಾರಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿಬ್ರಾನ್ ಸಂಗೀತ ಸಂಯೋಜಿಸಿದ್ದಾರೆ.
ಎಸಿಪಿ ಕೃಷ್ಣ (ವೆಂಕಟೇಶ್) ಒಬ್ಬ ಕರುಣಾಮಯಿ, ಅಪರಾಧಿಗಳ ಬಗ್ಗೆಯೂ ಸಹಾನುಭೂತಿ ಹೊಂದಿರುತ್ತಾನೆ. ಶೈಲಜಾ (ನಯನತಾರಾ), ಶಾಸ್ತ್ರಿ (ಜಯಪ್ರಕಾಶ್) ಎಂಬ ಆರೋಪಿಯ ಮಗಳು. ಶೈಲಜಾ ತನ್ನ ಅಜ್ಜಿ (ಸೌಕಾರ್ ಜಾನಕಿ) ಮತ್ತು ೪ ಜನ ಸಹೋದರಿಯರಿಯರನ್ನು ಕ್ಯಾಟರಿಂಗ ಮಾಡಿ ಸಾಕುತ್ತಿರುತ್ತಾಳೆ. ಮತ್ತೊಂದು ಕಡೆ, ಶಾಸಕ ಪುಚಪ್ಪ (ಪೊಸಾನಿ ಕೃಷ್ಣ ಮುರಳಿ) ಅವರ ಸಹಾಯಕರಾಗಿದ್ದ ಗೂಂಡಾ ಮಲ್ಲೇಶ್ ಯಾದವ್ (ಸಂಪತ್ ರಾಜ್) ಅವರಿಂದ ಬೆದರಿಕೆಯನ್ನು ಎದುರಿಸುತ್ತಿರುತ್ತಾರೆ ಹಾಗೆ ಅವಳ ತಾಯಿಯ ತಮ್ಮ ಬಟಾಯಿ ಬಾಬ್ಜಿ (ಪೃಥ್ವಿರಾಜ್),ಮದುವೆಯಾಗಲು ಪ್ರತಿದಿನ ಹಿಂಸಿಸುತ್ತಾನೆ.
ಕೃಷ್ಣನು ಒಮ್ಮೆ ಶೈಲಜಾಳನ್ನು ಭೇಟಿಯಾಗುತ್ತಾನೆ. ಅವನು ಅವಳನ್ನು ಮೊದಲ ನೋಟದಲ್ಲೇ ಪ್ರೀತಿಸುತ್ತಾನೆ. ನಂತರ, ಅವಳ ಸಮಸ್ಯೆಗಳ ಬಗ್ಗೆ ಅವನು ತಿಳಿದುಕೊಳ್ಳುತ್ತಾನೆ. ಕೃಷ್ಣನು ಶೈಲಜಾ ಕುಟುಂಬವನ್ನು ಹೇಗೆ ರಕ್ಷಿಸುತ್ತಾನೆ? ತಂದೆಯ ಮುಗ್ಧತೆಯನ್ನು ಹೇಗೆ ಸಾಬೀತುಪಡಿಸುತ್ತಾನೆ? ಅಪರಾಧಿಗಳನ್ನು ಹೇಗೆ ಹಿಡಿಯುತ್ತಾನೆ? ಎಂಬುದು ಈ ಚಿತ್ರದ ಸಾರಾಂಶ
ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಚಲನಚಿತ್ರ “ಬಾಬು ಬಂಗಾರ” ಭಾನುವಾರ (18.10.2020) ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ