ನವರಾತ್ರಿ ಚಿತ್ರದಲ್ಲಿ ನಾಯಕಿ ಹೃದಯ ಅವಂತಿ

Published on

407 Views

ಲಕ್ಷ್ಮೇಕಾಂತ್ ಚೆನ್ನ ನಿರ್ದೇಶನದ ‘ನವರಾತ್ರಿ’ ಚಿತ್ರದಲ್ಲಿ ‘ಒರಟ ಐ ಲವ್ಯೂ’ ಹಾಗೂ ‘ತ್ರಾಟಕ’ ಚಿತ್ರದ ಖ್ಯಾತಿಯ ನಟಿ ಹೃದಯ ಅವಂತಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಕಾಫಿಸ್ ಸಿನಿಮಾ’ ಬ್ಯಾನರ್ ಅಡಿಯಲ್ಲಿ ನಿರ್ಮಿತವಾಗಿರುವ ಈ ಚಿತ್ರಕ್ಕೆ ಸಮನ್ಯ ರೆಡ್ಡಿ ವಂಶಿ ಬಂಡವಾಳವನ್ನು ಹೂಡಿದ್ದಾರೆ.
ನವರಸಗಳಿಂದ ಕೂಡಿದ ಪಾತ್ರವನ್ನು ಮಾಡುತ್ತಿರುವ ನಾಯಕಿಯೂ ಈ ಚಿತ್ರದಲ್ಲಿ ಮಾರ್ಡನ್ ಹಾಗೂ ಸಾಂಪ್ರದಾಯಿಕ ಲುಕ್ ಎರಡರಲ್ಲೂ ಕಾಣಿಸಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದ್ದೂ, ನವರಸಗಳಿಂದ ಕೂಡಿದ ಅಂಶಗಳನ್ನು ಒಳಗೊಂಡಿದೆ. ಇಲ್ಲಿ ದೇವರು ಹಾಗೂ ದೆವ್ವ ಎರಡು ಅಂಶಗಳು ಪ್ರಮುಖವಾದ ಪಾತ್ರವನ್ನು ವಹಿಸಿದೆ.

ಪದ್ಮವಾತಿ ಸೀರಿಯಲ್ ಖ್ಯಾತಿಯ ತ್ರಿವಿಕ್ರಮ್ ನಾಯಕನಾದರೆ, ಶಿವ ಮಂಜು, ಕಾರ್ತಿಕ್, ಪ್ರಣಯ ಮೂರ್ತಿ, ಲೋಕೇಶ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಒಂದು ಫೈಟ್ ಒಳಗೊಂಡಿದ್ದೂ, ಯಾವುದೇ ರೀತಿಯ ಹಾಡಿಲ್ಲದಿರುವುದೇ ಚಿತ್ರದ ವಿಶೇಷವಾಗಿದೆ.


ಸಂಗೀತ ನಿರ್ದೇಶಕರಾಗಿ ತೆಲುಗು ಸಿನಿಮಾ ‘ಛೋಟಾ ಭೀಮ್’ ಹಾಗೂ ‘ಮನು’ ಖ್ಯಾತಿಯ ನರೇಶ್ ಕುಮಾರನ್ ಸಂಯೋಜನೆ ಮಾಡಿದ್ದಾರೆ.
ಚಿತ್ರವೂ 1. 55 ನಿಮಿಷಗಳನ್ನು ಒಳಗೊಂಡಿದ್ದೂ, ಸಂಕಲನವು ಲೋಕೇಶ್ ಚೆನ್ನ ಹಾಗೂ ಛಾಯಾಗ್ರಹಣ ಸಂಕಲನವನ್ನು ಅನ್ನಪೂರ್ಣ ಸ್ಟುಡಿಯೋಸ್ ಮಾಡಿದೆ.
ಅತಿ ಶೀಘ್ರದಲ್ಲಿಯೇ ಈ ಚಿತ್ರವೂ ಪ್ರೇಕ್ಷಕರ ಮುಂದೆ ತೆರೆಕಾಣಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com