ಜನವರಿ 04ರಿಂದ ತೆರೆಗೆ ಬರಲಿದೆ ದೊರೈ-ಭಗವಾನ್ ಅವರು ನಿರ್ದೇಶನ ಮಾಡಿರುವ ಆಡುವಗೊಂಬೆ

Published on

285 Views

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ದೊರೈ-ಭಗವಾನ್‌ ಜೋಡಿ
ಒಂದು. ಡಾ.ರಾಜ್ ಕುಮಾರ್ ವಿಷ್ಣುವರ್ಧನ್ ಸೇರಿದಂತೆ ಕನ್ನಡದ ಮೇರು ನಟರ ಚಿತ್ರಗಳನ್ನು ನಿರ್ದೇಶನ ಮಾಡಿರುವ ಇವರು 22ವರ್ಷಗಳ ನಂತರ ಮತ್ತೊಮ್ಮೆ ನಿರ್ದೇಶನಕ್ಕೆ ಮರಳಿದ್ದಾರೆ. ಇವರು ನಿರ್ದೇಶನ ಮಾಡಿರುವ ಆಡುವ ಗೊಂಬೆ ಚಿತ್ರವು ಜನವರಿ 04ರಿಂದ ತೆರೆಗೆ ಬರಲಿದೆ. ಡಾ.ರಾಜ್ ಅವರ ಪುತ್ರರಾದ ಶಿವಣ್ಣ, ರಾಘಣ್ಣ, ಪುನೀತ್ ಹಾಗೂ ನಟ ವಿಜಯ್ ರಾಘವೇಂದ್ರ ಅವರು ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌ ಅವರು ಈ ಚಿತ್ರದಲ್ಲಿ ನಾಯಕನಾಗಿದ್ದು,ಅನಂತನಾಗ್‌ ಅವರು‘ಆಡುವ ಗೊಂಬೆ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.ಹೇಮಂತ್‌ ಕುಮಾರ್ ಅವರ ಸಂಗೀತ ಸಂಯೋಜನೆ, ಗಣೇಶ್ ಕ್ಯಾಮೆರಾ, ಶಿವಪ್ರಸಾದ್ ಸಂಕಲನ ಈ ಚಿತ್ರಕ್ಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com