ರವಿ ಶ್ರೀವತ್ಸ ಅವರ ನಿರ್ದೇಶನದ ಹೊಸ ಚಿತ್ರದ ಕಲಾವಿದರ ಆಯ್ಕೆಗಾಗಿ “ಆಡಿಷನ್”

Published on

375 Views

ಕನ್ನಡ ಚಿತ್ರರಂಗದಲ್ಲಿ ಡೆಡ್ಲಿ ಡೈರೆಕ್ಟರ್ ಎಂದೇ ಖ್ಯಾತಿ ಪಡೆದಿರುವ
ನಿರ್ದೇಶಕ ರವಿ ಶ್ರೀವತ್ಸ ಅವರು ಹೊಸ ಚಿತ್ರವೊಂದನ್ನು ಸದ್ಯದಲ್ಲೇ ಶುರುಮಾಡಲಿದ್ದಾರೆ. ಜೆ.ಡಿ.ಪ್ರೊಡಕ್ಷನ್ಸ್ ಬ್ಯಾನರ್ ನವರು ಈ ಚಿತ್ರವನ್ನು
ನಿರ್ಮಾಣ ಮಾಡುತ್ತಿದ್ದು ಇದೊಂದು ವಿಭಿನ್ನ ಕಥಾಹಂದರವಿರುವ
ಚಿತ್ರವಾಗಿದ್ದು ಚಿತ್ರದಲ್ಲಿ ಹೊಸ ಪ್ರತಿಭೆಗಳನ್ನು ಪರಿಚಯಿಸಲಿದೆ. ಹೊಸ
ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿಯೇ ಚಿತ್ರತಂಡ ಆಡಿಷನ್
ನಡೆಸುತ್ತಿದೆ. ಇದೇ ತಿಂಗಳ 22ರಂದು ಬೆಳಿಗ್ಗೆ 10ರಿಂದ ಸಂಜೆ 4:00ವರೆಗೂ ಈ ಆಡಿಷನ್ ನಡೆಯಲಿದೆ. ಈ ಆಡಿಷನ್ ನಲ್ಲಿ 20-25ವರ್ಷದೊಳಗಿನ ಯುವಕರು ಹಾಗೂ 18-23ವರ್ಷದೊಳಗಿನ ಯುವತಿಯರು ಭಾಗವಹಿಸಬಹುದು. ಬಣ್ಣದ ಲೋಕದಲ್ಲಿ ತಾರೆಯಾಗಿ ಮಿನುಗಬೇಕು ಎಂದು ಕನಸುಕಟ್ಟಿಕೊಂಡು ಅವಕಾಶಕ್ಕಾಗಿ ಎದುರು ನೋಡುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದ್ದು ಆಸಕ್ತರು ಸದುಪಯೋಗ ಪಡಿಸಿಕೊಳ್ಳಿ.‌

ಪೋಸ್ಟರ್ ನಲ್ಲಿ ಆಡಿಷನ್ ನಡೆಯುವ ಸ್ಥಳದ ವಿವರವಿದೆ ಗಮನಿಸಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com