ಕಪೋ ಕಲ್ಪಿತಂ ಗೆ ಪ್ರೇಕ್ಷಕ ಬಹುಪರಾಕ್..

Published on

707 Views

ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ.. ಕನ್ನಡಿಗರ ಸಾಧನೆಗೆ ಬೆರಗಾದ ಚಿತ್ರರಂಗ. ಕೇವಲ 5 ದಿನಗಳಲ್ಲಿ ಚಿತ್ರೀಕರಣಗೊಂಡು ಶೀಘ್ರದಲ್ಲೇ ಓಟಿಟಿ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆ ಆಗಲಿರುವ ಸವ್ಯಸಾಚಿ ಕ್ರಿಯೇಷನ್ ಬ್ಯಾನರ್ ನ ‘ಕಪೋ ಕಲ್ಪಿತಂ’ ಚಿತ್ರದ ಮೊದಲ ಟ್ರೇಲರ್ ಚಿತ್ರತಂಡ ಬಿಡುಗಡೆ ಮಾಡಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಬುದ್ಧ ನಟನೆ ಹಾಗೂ ವಿನೂತನ ನಿರೂಪಣೆಗೆ ವೀಕ್ಷಕ ಮನಸೋತಿದ್ದಾನೆ. ಗಿಂಬಲ್ ತಂತ್ರಜ್ಞಾನದಲ್ಲಿ ಒಂದೇ ಲೊಕೇಶನ್ ನಲ್ಲಿ ಕೇವಲ 5 ದಿನದಲ್ಲಿ ಚಿತ್ರೀಕರಣವಾದ ಚಿತ್ರವೆಂಬ ಹೆಗ್ಗಳಿಕೆಯ ಜೊತೆಗೆ ಹಿಂದಿ ಡಬ್ಬಿಂಗ್ ವಿಷಯದಲ್ಲೂ ಒಬ್ಬ ಡಬ್ಬಿಂಗ್ ಕಲಾವಿದನಿಂದ 12 ಪಾತ್ರಗಳ ಡಬ್ಬಿಂಗ್ ಪಡೆದ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರದ್ದು. ‘ಕಪೋ ಕಲ್ಪಿತಂ’ ಚಿತ್ರವನ್ನು ಸುಮಿತ್ರಾ ಗೌಡ ನಿರ್ದೇಶನ ಮಾಡಿ ನಾಯಕಿಯಾಗಿ ಅಭಿನಹಿಸುವ ಮುಖಾಂತರ ಇನ್ನೊಂದು ದಾಖಲೆ ಮಾಡಿದ್ದಾರೆ. ರಮೇಶ್ ಗೌಡ ಹಾಗೂ ಕನಿಕ ಕವಿತಾ ಪೂಜಾರಿ ನಿರ್ಮಾಣ ಮಾಡಿದ್ದೂ, ಕಥೆ ಚಿತ್ರಕತೆ ಸಂಭಾಷಣೆ ಗಣಿ ದೇವ್ ಕಾರ್ಕಳ ಬರೆದಿದ್ದಾರೆ. ಬಾತು ಕುಲಾಲ್ ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದೂ, ಸಂಗೀತ ಗಣಿ ದೇವ್ ಹಾಗೂ ಹರ್ಷ ಶೆಟ್ಟಿ ಲೆಸ್ಟರ್ ಫೆರ್ನಾಂಡಿಸ್ ನೀಡಿದ್ದಾರೆ. ಚಿತ್ರವು ಓಟಿಟಿ ಹಾಗೂ ಚಿತ್ರಮಂದಿರಗಲ್ಲಿ ಶೀಘ್ರದಲ್ಲಿ ತೆರೆಕಾಣಲಿದೆ… ಟ್ರೇಲರ್ ಲಿಂಕ್ ಇಲ್ಲಿದೆ..

Copyright ©2026 . All Rights Reserved. privacy | terms Whatsapp: 9538193653 Email: hello@flixoye.com