Attempt to Murder movie based on real story
Attempt to Murder movie based on real story
ನೈಜ ಘಟನೆ ಆಧಾರಿತ ಅಟ್ಟೆಂಪ್ಟ್ ಟು ಮರ್ಡರ್ ಚಿತ್ರ Attempt To Murder
ನೈಜ ಘಟನೆಯನ್ನಾಧರಿಸಿ ಸಾಕಷ್ಟು ಸಿನಿಮಾಗಳು ಬರುತ್ತವೆ. ಸಮಾಜದಲ್ಲಿ ದೊಡ್ಡ ಸುದ್ದಿಗೆ ಕಾರಣವಾದ ಘಟನೆಗಳಿಗೆ ಸಿನಿಮೀಯ ರೂಪ ಕೊಟ್ಟು ಪ್ರೇಕ್ಷಕರನ್ನು ಮೋಡಿ ಮಾಡಲು ಬರುವ ಸಿನಿಮಾ ಸಾಲಿಗೆ ಈಗ ಹೊಸ ಸೇರ್ಪಡೆ “ಎಟಿಎಂ’. “ಎಟಿಎಂ’ (ಅಟೆಂಪ್ಟ್ ಟು ಮರ್ಡರ್) ಸಿನಿಮಾವೊಂದು ತಯಾರಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರ ಏಪ್ರಿಲ್ 20ರಂದು ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಅಮರ್ ನಿರ್ದೇಶಕರಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ನಡೆದ “ಎಟಿಎಂ’ ದರೋಡೆಯನ್ನಿಟ್ಟುಕೊಂಡು ಈ ಸಿನಿಮಾದ ಕಥೆ ಮಾಡಿದ್ದಾರೆ ನಿರ್ದೇಶಕರು. ಹಾಗಂತ ಯಥಾವತ್ ಅದನ್ನೇ ಇಟ್ಟುಕೊಂಡು ಸಿನಿಮಾ ಮಾಡಿಲ್ಲವಂತೆ. ಅದಕ್ಕೊಂದಿಷ್ಟು ಸಿನಿಮೀಯ ಟ್ವಿಸ್ಟ್‌ಗಳನ್ನು ಸೇರಿಸಿ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕನಿಗಿಂತ ಹೆಚ್ಚು ಸ್ಕೋಪ್ ಇರೋದು ವಿಲನ್‌ಗಂತೆ. ಅದನ್ನು ಸ್ವತಃ ನಿರ್ದೇಶಕರೇ ಹೇಳುತ್ತಾರೆ. “ಈ ಕಥೆ ಬರೆಯೋದಕ್ಕೆ ನನಗೆ ಸ್ಫೂತಿ ವಿಲನ್ ಪಾತ್ರ.
ಆ ಪಾತ್ರವನ್ನು ಸೂರ್ಯ ಮಾಡಿದ್ದಾರೆ. ಈ ಪಾತ್ರಕ್ಕೆ ಉದ್ದ ಗಡ್ಗ ಬೇಕಿತ್ತು. ಅದೇ ಕಾರಣಕ್ಕೆ ಅವರಿಗೆ ಒಂದು ವರ್ಷ ದಾಡಿ ಬಿಡೋಕೆ ಹೇಳಿದೆ’ ಎಂದು ವಿಲನ್ ಪಾತ್ರದ ತಯಾರಿ ಬಗ್ಗೆ ಹೇಳುತ್ತಾರೆ ಅಮರ್. ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕನಿಗೆ ಇಂಟ್ರೊಡಕ್ಷನ್ ಸಾಂಗ್ ಇರುತ್ತದೆ. ಆದರೆ, “ಎಟಿಎಂ’ ಚಿತ್ರದಲ್ಲಿ ವಿಲನ್‌ಗೆಂದೇ ಇಂಟ್ರೊಡಕ್ಷನ್ ಹಾಡು ಇದೆಯಂತೆ. ಆ ಹಾಡನ್ನು ತುಂಬಾ ವಿಶೇಷವಾಗಿ ಚಿತ್ರೀಕರಿಸಲಾಗಿದೆಯಂತೆ.
ಸೂರ್ಯ ಇಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ಹೇಮಲತಾ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವಿನಯ್, ಚಂದು, ಶೋಭಿತಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ನೋಡಿರುವ ನಟರಾದ ಯಶ್ ಹಾಗೂ ಸುದೀಪ್ ಪ್ರಶಂಸೆಯ ಮಾತುಗಳನ್ನಾಡಿರುವುದು ನಿರ್ದೇಶಕ ಅಮರ್ ಅವರ ವಿಶ್ವಾಸವನ್ನು ಹೆಚ್ಚಿಸಿದೆ. “ಎಟಿಎಂ’ ಚಿತ್ರವನ್ನು ನಾರಾಯಣ್ ನಿರ್ಮಿಸಿದ್ದಾರೆ.