‘ಸೂಪರ್ ಸ್ಟಾರ್’ಗೆ ಸಿಕ್ಕಳು ಅಸ್ಸಾಂ ಬೆಡಗಿ

Published on

510 Views

ರಿಯಲ್ ಸ್ಟಾರ್ ಉಪೇಂದ್ರರವರ ಅಣ್ಣನ ಮಗ ನಿರಂಜನ್ ಸೂಪರ್ ಸ್ಟಾರ್ ಸಿನಿಮಾದ ಮೂಲಕ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸೂಪರ್ ಸ್ಟಾರ್ ಸಿನಿಮಾಕ್ಕೆ ನಾಯಕಿಯಾಗಿ ಉತ್ತರ ಭಾರತದ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಿಂದಿ ಸೇರಿದಂತೆ ಸಾಕಷ್ಟು ಭಾಷೆಗಳ ಆಲ್ಬಂಗಳಲ್ಲಿ ನಟಿಸಿರುವ ಮಾಡೆಲ್ ಕಮ್ ಡಾನ್ಸರ್ ಆಗಿರುವ ಝಾರಾ ಯಾಸ್ಮೀನ್ ಸೂಪರ್ ಸ್ಟಾರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ‘ಸೂಪರ್ ಸ್ಟಾರ್’ ಸಿನಿಮಾದಲ್ಲಿ ನೃತ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವುದರಿಂದ ನಾಯಕಿಗೂ ನೃತ್ಯ ಗೊತ್ತಿರಬೇಕು ಎಂಬ ದೃಷ್ಟಿಯಲ್ಲಿ ನಾವು ಸಾಕಷ್ಟು ಜನರನ್ನು ಆಡಿಶನ್ ಮಾಡಿದ್ದೇವೆ‌.

ಅಸ್ಸಾಂ ಮೂಲದ ಝಾರಾ ಯಾಸ್ಮೀನ್ ಅವರು ಈ ಸಿನಿಮಾಕ್ಕೆ ಓಕೆ‌ ಅನಿಸಿತು ಎನ್ನುತ್ತಾರೆ ನಿರ್ದೇಶಕ ರಮೇಶ್ ವೆಂಕಟೇಶ್. ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಜನವರಿಯಿಂದ ಮಂಗಳೂರಿನಲ್ಲಿ ಚಿತ್ರೀಕರಣ ಮುಂದುವರಿಸಲಿದೆ. ಆಗ ಝರಾ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com