ಅಶಿಕಾ ಸಹೋದರಿಯ ರೊಮ್ಯಾಂಟಿಕ್ “ಅಂದವಾದ” ಹಾಡು.!!!

Published on

508 Views

ಮಳೆಗಾಲಕ್ಕೆ ಬರ್ತಿದೆ ರಿಫ್ರೆಶಿಂಗ್ ಲವ್ ಸಿನಿಮಾ “ಅಂದವಾದ”.. ಲವ್ಲಿ ಹಾಡು ಮಳೆಯಲಿ ಜೊತೆಯಲಿ ಬರ್ತಿದೆ “ಅಂದವಾದ” ಸಿನಿಮಾ..!!!!

ಸ್ಯಾಂಡಲ್ ವುಡ್ ಅಂಗಳದಲ್ಲಿ ಮತ್ತೆ ಹೊಸಬರ ಪ್ರಯತ್ನಗಳು ಹೆಚ್ಚಾಗ್ತಿವೆ..ಅದ್ರಲ್ಲೂ ಹೊಸಬರು ಪರಿಶುದ್ಧ ಪ್ರೀತಿ, ಪ್ರೇಮದ ಕಥೆಗಳನ್ನ ಮಾಡಿ ಗೆಲ್ಲೋ ದಾರಿಯನ್ನ ಹುಡುಕ್ತಿದ್ದಾರೆ.

ಕನ್ನಡದಲ್ಲಿ ಯಾವಾಗ್ಲೂ ಹೊಸಬರು ಗೆದ್ದಿರೋ ಲವ್ ಥೀಮ್ ನ್ನೇ ಫಾಲೋ ಮಾಡಿಕೊಂಡು ಇಲ್ಲೊಬ್ಬ ಹೊಸ ನಾಯಕ ಕನ್ನಡ ಚಿತ್ರರಂಗಕ್ಕೆ ಆಗಮಿಸ್ತಿದ್ದಾರೆ.. ಹೆಸರು ಜೈ.. ಜೈ ಅಂತ ಹೆಸರಿಟ್ಟುಕೊಂಡಿರೋ ಈ ಹುಡುಗ ಚೊಚ್ಚಲ ಚಿತ್ರದಲ್ಲೇ “ಅಂದವಾದ” ಅಂತ ರೊಮ್ಯಾಂಟಿಕ್ ಆಗಿ ಫೀಲ್ಡಿಗೆ ಇಳಿದಿದ್ದಾರೆ.

ಇವರಿಗೆ ಕನ್ನಡ ಚಿತ್ರರಂಗ ಖ್ಯಾತ ನಟಿ ಅಶಿಕಾ ರಂಗನಾಥ್ ಅವ್ರ ಸಹೋದರಿ ಅನುಷಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಅನುಷಾ ಈ ಹಿಂದೆ ದಿ ಗ್ರೇಟ್ ಸ್ಟೋರಿ ಆಫ್ ಸೋಡಾ ಬುಡ್ಡಿ ಅನ್ನೋ ಚಿತ್ರದಲ್ಲಿ ಅಭಿನಯಿಸಿದ್ದರು. ಚಲ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಟ್ಯಾಲೆಂಟೆಡ್ ಡೈರೆಕ್ಟರ್ ಚಲ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.. ಅಂದವಾದ ಚಿತ್ರಕ್ಕೆ ವಿಕ್ರಮ್ ವರ್ಮನ್ ಸಂಗೀತ ಸಂಯೋಜಿಸಿದ್ದು, ಹರೀಶ್ ಎನ್ ಸೊಂಡೆಕೊಪ್ಪ ಛಾಯಾಗ್ರಹಣವಿದೆ..

ಈಗಾಗ್ಲೇ ಎರಡು ಬ್ಯೂಟಿಫುಲ್ ಲಿರಿಕಲ್ ವಿಡಿಯೋಗಳನ್ನ ರಿಲೀಸ್ ಮಾಡಿದ್ದ ಚಿತ್ರತಂಡ, ಇದೀಗ ಅಂದವಾದ ಟೈಟಲ್ ಹಾಡಿನ ವಿಡಿಯೋ ವರ್ಶನ್ ರಿಲೀಸ್ ಮಾಡಿದೆ.. ವಿಜಯ್ ಪ್ರಕಾಶ್ ಧನಿಯಾಗಿರೋ ಈ ಹಾಡು ಕೇಳೋದಕ್ಕೆ ಸಖತ್ ಮೆಲೋಡಿಯಾಗಿದ್ದು, ಅನುಷಾ ಮತ್ತು ಜೈ ಕೆಮಿಸ್ಟ್ರಿ ಹಾಡಿನ ಹೈಲೈಟ್ ಗಳಲ್ಲೊಂದಾಗಿದೆ.. ಕರ್ನಾಟಕದ ರಮಣಿಯ ತಾಣಗಳಲ್ಲಿ ಚಿತ್ರಿಸಿರೋ ಈ ಹಾಡು ಅಂದವಾದ ಸಿನಿಮಾದ ಗುಣಮಟ್ಟವನ್ನ ತೋರಿಸ್ತಿದ್ದೆ.. ಜೊತೆಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸ್ತಿದೆ..

Copyright ©2026 . All Rights Reserved. privacy | terms Whatsapp: 9538193653 Email: hello@flixoye.com