ಪ್ರಜ್ವಲ್ ದೇವರಾಜ್ ಗೆ ನಾಯಕಿಯಾದ ಆಶಿಕಾ ರಂಗನಾಥ್

Published on

422 Views

ಅರ್ಜುನ ಚಿತ್ರದ ನಂತರ ನಿರ್ದೇಶಕ ಪಿ.ಸಿ.ಶೇಖರ್ ಮತ್ತು ಪ್ರಜ್ವಲ್ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಬರುತ್ತಿರುವ ಸುದ್ದಿ ಕನ್ನಡ
ಚಿತ್ರರಂಗದಲ್ಲಿ ಹಾಗೂ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಈಗ ಈ ತಂಡಕ್ಕೆ ಸಂಭಂದಿಸಿದಂತೆ ಮತ್ತೊಂದು ಸುದ್ದಿ ಹೊರಬಂದಿದೆ.
ಪ್ರಜ್ವಲ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಅವರು ನಟಿಸಲಿದ್ದಾರೆ ಎಂದು ನಿರ್ದೇಶಕರಾದ ಪಿ.ಸಿ.ಶೇಖರ್ ತಿಳಿಸಿದ್ದಾರೆ.

ರ್ಯಾಂಬೋ 2 ಚಿತ್ರದ ಚುಟು ಚುಟು ಹಾಡಿನ ಮೂಲಕ ಕರ್ನಾಟಕದ ಮನಗೆದ್ದಿರುವ ಆಶಿಕಾ ರಂಗನಾಥ್ ಅವರು ಮೊದಲ ಬಾರಿಗೆ ಪ್ರಜ್ವಲ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಂದನ್ ಗೌಡ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಚಿತ್ರದ ಮುಹೂರ್ತ ಸದ್ಯದಲ್ಲೇ ನಡೆಯಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com