ಬಳ್ಳಾರಿಯ ಜನರ ಮೆಚ್ಚುಗೆ ಗಳಿಸಿದ ಅಪ್ಪು.

Published on

363 Views

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಿನಿಮಾ ಅಂದ್ರೆ ಸಾಕು ಅಲ್ಲಿ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ಸ್ಟೇಜ್ ಮೇಲೆ ಕುಣಿಯಲಾರಂಭಿಸಿದರೆ ಅಲ್ಲಿ ಪವರ್ ಪಾಸ್ ಆಗುತ್ತದೆ. ಡ್ಯಾನ್ಸ್ ಗೆ ಮಾತ್ರವಲ್ಲದೆ ಇವರು ಹಾಡಿನಲ್ಲೂ ಸೈ. ಪುನೀತ್ ಅಭಿನಯದ ರಾಜಕುಮಾರ ಚಿತ್ರ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ರಾಜಕುಮಾರ ಚಿತ್ರದ “ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ” ಅನ್ನೋ ಹಾಡು ಸಾಕಷ್ಟು ಜನಪ್ರಿಯಗೊಂಡಿತ್ತು.

ನಟ ಸಾರ್ವಭೌಮ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಪುನೀತ್ ಬಿಡುವಿನ ವೇಳೆಯಲ್ಲಿ ಕವಯತ್ರಿ ಜಿಂದಾಲ್ ಸಂಸ್ಥೆಯ ಲತಾ ನಾವೆಲ್ ಅವರು ರಚಿಸಿದ ಹೊಸ ಆಲ್ಬಂ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿ, ಅಲ್ಲಿ ಲತಾ ಅವರ ಆಲ್ಬಂ ಅನ್ನು ಬಿಡುಗಡೆ ಮಾಡಿದ ಪವರ್​ ಸ್ಟಾರ್​ ‘ರಾಜಕುಮಾರ’ ಚಿತ್ರದ ಹಾಡನ್ನು ಹಾಡಿ ಎಲ್ಲರನ್ನೂಖುಷಿಗೆ ಪಾತ್ರರಾಗಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com