ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮಾ
ಸೆಪ್ಟೆಂಬರ್ ನಲ್ಲಿ ತಾವು ತಾಯಿಯಾಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದ ಅನುಷ್ಕಾ ಶರ್ಮಾ ಶೀಘ್ರದಲ್ಲಿ ತಾವು ಮೂವರಾಗಲಿದ್ದೇವೆ ಎಂದು ಬೇಬಿ ಬಂಪ್ ಪೋಟೋ ಹಂಚಿಕೊಂಡಿದ್ದರು. ಇವರಿಗೆ ಪ್ರಧಾನಿ ಮೋದಿ ಸೇರಿದಂತೆ ಅವರ ಅಭಿಮಾನಿಗಳು ಚಿತ್ರರಂಗದವರು ಶುಭಕೋರಿದ್ದರು.
ಜನವರಿಯಲ್ಲಿ ಮನೆಗೆ ಬರುವ ಮಗುವಿನ ಆಗಮನಕ್ಕೆ ಕಾಯುತ್ತಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆರಿಗೆ ಸಮಯದಲ್ಲಿ ಜೊತೆಗಿರಬೇಕೆಂದು ಇಂಡಿಯಾ ಆಸ್ಟ್ರೇಲಿಯಾ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯದಲ್ಲಿ ಬಿಡುವು ಪಡೆದುಕೊಂಡಿದ್ದರು ವಿರಾಟ್. ಸಂತಸದ ಗಳಿಗೆಗಾಗಿ ಕಾಯುತ್ತಿದ್ದ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಗೆ ಇಂದು ಸಂಭ್ರಮದ ದಿನ ನಟಿ ಅನುಷ್ಕಾ ಶರ್ಮಾ ಅವರಿಗೆ ಮಧ್ಯಾಹ್ನ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಷಯವನ್ನು ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ.