ತೆರೆಗೆ ಬರಲು ಸಜ್ಜಾಗಿದೆ ಮತ್ತೊಂದು ಸ್ನೇಹಮಯ ಚಿತ್ರ.

Published on

381 Views

ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರು ‘ದಿಗ್ಗಜರು’ ಚಿತ್ರದಲ್ಲಿ ಸ್ನೇಹದ ಮಹತ್ವವನ್ನು ಹೇಳಿದ್ದರು. ಇದೀಗ ಮತ್ತೆ ಸ್ನೇಹದ ಮಹತ್ವವನ್ನು ಸಾರುವ “ಕುಚ್ಚಿಕೂ ಕುಚ್ಚಿಕು” ಟೈಟಲ್ ಇಟ್ಟುಕೊಂಡ ಚಿತ್ರವೊಂದು ತೆರೆಗೆ ಬರಲು ರೆಡಿಯಾಗಿದೆ. ಅದನ್ನು ನಿರ್ದೇಶನ ಮಾಡಿರೋದು ಕೂಡ ಡಿ.ರಾಜೇಂದ್ರ ಬಾಬು ರವರು. ಸಂಗೀತ ಹಾಗೂ ಸಾಹಿತ್ಯ ಹಂಸಲೇಖ ಅವರದ್ದಾಗಿದ್ದು ಚಿತ್ರ ಹೇಗಿದೆ ಅನ್ನೋ ಕ್ಯೂರಿಯಾಸಿಟಿನಾ ಬಿಲ್ಡ್ ಮಾಡಿದೆ.ಇದೀಗ ‘ಕುಚ್ಚಿಕೂ ಕುಚ್ಚಿಕು’ ಚಿತ್ರವು ಬಿಡುಗಡೆಗೆ ಸಿದ್ದಗೊಂಡಿದ್ದು ಅವರ ನೆನಪಿಗಾಗಿ ,ಗೌರವ ಸೂಚಿಸಿ,ಅವರ ಕೊನೆ ಸಿನಿಮಾವನ್ನು ನಾವೇ ರಿಲೀಸ್ ಮಾಡುತ್ತೇವೆ ಎಂದು ಜಯಣ್ಣಫಿಲ್ಮಂ ಬ್ಯಾನರ್ ನ ಹಂಚಿಕೆದಾರರಾದ ಜಯಣ್ಣ- ಭೋಗೇಂದ್ರರವರು ಈ ಚಿತ್ರದ ಬಿಡುಗಡೆಯ ಹಕ್ಕನ್ನು ಪಡೆದಿದ್ದು, ಸ್ವತಃ ಮೇಲುಸ್ತುವಾರಿಯನ್ನು ವಹಿಸಿಕೊಂಡು ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.

ಚಿತ್ರವನ್ನು ಜಯಣ್ಣ-ಭೋಗೇಂದ್ರ ಹಾಗೂ ಖ್ಯಾತ ನಿರ್ಮಾಪಕರಾದಂತ ಸುರೇಶ ಗೌಡ ಅವರು ಒಟ್ಟಿಗೆ ಕುಳಿತು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಸಿನಿಮಾದ ಕಥೆ ,ಮೇಕಿಂಗ್ ಹಾಗೂ ಡಿ. ರಾಜೇಂದ್ರ ಬಾಬು ಅವರ ನಿರ್ದೇಶನದ ಮೇಲೆ ತುಂಬಾ ಒಲವನ್ನು ತೋರಿದ್ದಾರೆ. ಅವರಿಗೆ ಚಿತ್ರದ ಕಥೆ ಹಾಗೂ ನಿರೂಪಣೆ ತುಂಬಾ ಇಷ್ಟಪಟ್ಟಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com