ಅನೀಶ್ ಪಕ್ಕಾ ಕಮರ್ಷಿಯಲ್
ಎಲ್ಲರೂ ಕೊಲೆ ಮಾಡಿ ಶರಣಾಗಲು ಸ್ಟೇಷನ್‍ಗೆ ಬರುತ್ತಾರೆ. ನೀನು ನೋಡಿದರೆ ಕೊಲೆ ಮಾಡಲು ಹೋಗುತ್ತಿರುವುದಾಗಿ ಹೇಳುತ್ತಿದ್ದೀಯಾ ಎಂದು ಪೋಲಿಸ್ ಇನ್ಸೆಪೆಕ್ಟರ್ ಹೇಳುತ್ತಾರೆ. ಅವನು ಇವತ್ತು ಅವಳನ್ನು ಎತ್ತಿ ಬಿಡುತ್ತೇನೆಂದು ಫೋಟೋ ತೋರಿಸುತ್ತಾನೆ. ಮುಂದೆ ಕುಟುಂಬದ ಸಂತಸದ ಕ್ಷಣಗಳು. ನಾಯಕ ನಾಯಕಿ ತುಂಟಾಟ, ವಿದೇಶಿ ತಾಣದಲ್ಲಿ ಹಾಡು, ಅಪ್ಪ-ಮಗನ ಸೆಂಟ್‍ಮೆಂಟ್. ಭರ್ಜರಿ ಸಾಹಸಗಳು ಇವೆಲ್ಲವು ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೂರುವರೆ ನಿಮಿಷದ ಟ್ರೈಲರ್ ನೋಡಿದ್ದು ಚಿತ್ರಮಂದಿರಕ್ಕೆ ಹೋಗುವಂತೆ ಮಾಡಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಕ್ಷಿತ್‍ಶೆಟ್ಟಿ ಮಾತನಾಡಿ ತುಘಲಕ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಸಂದರ್ಭದಲ್ಲಿ ಬೇಸರವಾಗಿದ್ದಾಗ, ಅನೀಶ್ ಎಲ್ಲರ ಜೀವನದಲ್ಲಿ ಫ್ಲಾಪ್ ಇದ್ದರೆ ಮುಂದೆ ಒಳ್ಳೆ ಕತೆಗಳು ಹುಟ್ಟಿಕೊಳ್ಳುತ್ತವೆ. ಇದು ಅವನ ಜೀವನಕ್ಕೆ ಅನ್ವಯಿಸುತ್ತದೆ. ಸಿನಿಮಾವು ಪ್ರಪಂಚದಾದ್ಯಂತ ಪಸರಿಸಲಿ ಎಂದು ಶುಭ ಹಾರೈಸಿದರು.
ಅನೀಶ್ ಜೊತೆ ನಟಿಸಿದ ಮೊದಲ ಚಿತ್ರ ನಮ್ ಏರಿಯಾದಲ್ಲಿ ಒಂದಿನ ಚಿತ್ರದ ಟ್ರೈಲರ್ ಶುರು ಮಾಡಿದಾಗ ಬಿಗ್ ಡೀಲ್ ಆಗಿತ್ತು. ಅದರಂತೆ ವಾಸುಗೂ ಆಗಲಿ ಎಂದು ಮೇಘನಾ ಗಾಂವ್ಕರ್ ಹೇಳಿದರು. ಅನೀಶ್ ಅವರ ಏಳು, ಬೀಳು, ಬೇಸರ, ಖಿನ್ನತೆ ಎಲ್ಲವನ್ನು 8-9 ವರ್ಷದಿಂದ ನೋಡುತ್ತಾ ಬಂದಿದ್ದೇನೆ. ಈ ಸಿನಿಮಾದಲ್ಲಿ ಪಕ್ಕಾ ಕಮರ್ಷಿಯಲ್ ಹೀರೋ ಆಗಿದ್ದಾನೆ ಎಂಬ ಹಾರೈಕೆಯ ಮಾತು ಸಿಂಧು ಲೋಕನಾಥ್ ಅವರದಾಗಿತ್ತು. ಐಪಿಎಲ್ ಮ್ಯಾಚ್ ಗೆಲ್ಲುತ್ತೋ ಗೊತ್ತಿಲ್ಲ. ಆದರೆ ವಾಸು ಗೆದ್ದೇ ಗೆಲ್ತಾನೆ ಅಂತ ಭವಿಷ್ಯ ನುಡಿದರು ಸಿಪಾಯಿ ಚಿತ್ರದ ನಾಯಕ ಮಹೇಶ್ ಸಿದ್ದಾರ್ಥ್. ಟ್ರೈಲರ್ ನೋಡಿದಾಗ ಸಕಾರಾತ್ಮಕ ಅಂಶಗಳು ಹೆಚ್ಚಿಗೆ ಕಾಣಿಸುತ್ತದೆ. ಕಮರ್ಷಿಯಲ್ ನಾಯಕನಾಗಿ ಅವರಿಗೊಂದು ಬ್ರೇಕ್ ಸಿಗಲಿ ಅಂತಾರೆ ಭರ್ಜರಿ ಖ್ಯಾತಿಯ ಚೇತನ್‍ಕುಮಾರ್. ಈ ತಂಡದಲ್ಲಿ ನಾನು ಭಾಗಿಯಾಗಿದ್ದೇನೆ. ಎರಡು ಹಾಡುಗಳನ್ನು ಬರೆಯಲಾಗಿದೆ. ಅನೀಶ್ ಲೋಕಲ್‍ನಿಂದ ಕಮರ್ಷಿಯಲ್ ಆಗಿದ್ದಾರೆ ಎನ್ನುವುದು ನಿರ್ದೇಶಕ ಹರಿ ಸಂತು ಹೇಳಿಕೆಯಾಗಿತ್ತು.
ನಾಯಕಿ ನಿಶ್ವಿಕನಾಯ್ಡು ಸಂತಸದಿಂದ ಅವಕಾಶ ನೀಡಿದ್ದಕ್ಕೆ ಥಾಂಕ್ಸ್ ಎಂದರು. ರಚನೆ, ನಿರ್ದೇಶನ ಮಾಡಿರುವ ಅಜಿತ್‍ವಾಸನ್ ಉಗ್ಗೀನ ಕಾಲಿಗೆ ಪೆಟ್ಟಾಗಿದ್ದರಿಂದ ವೇದಿಕೆಗೆ ಬರದೆ ಕೊನೆಯಲ್ಲಿ ತಂಡದೊಂದಿಗೆ ಫೋಸ್ ಕೊಟ್ಟರು. ಅಂತಿಮವಾಗಿ ಮೈಕ್ ನಾಯಕ, ನಿರ್ಮಾಪಕ ಅನೀಶ್‍ತೇಜಶ್ವರ್ ಕೈಗೆ ಹೋಯಿತು. ಎಲ್ಲರೂ ಕಷ್ಟಪಟ್ಟು ಮಾಡಿರುವ ಚಿತ್ರ. ಅಖಿರಾ ಮಾಡುವ ಸಂದರ್ಭದಲ್ಲಿ ನಿರ್ದೇಶಕರು ಕತೆಯ ಒಂದು ಎಳೆಯನ್ನು ವಿವರಿಸಿದ್ದರು. ಅಂದೇ ಮಾಡೋಣವೆಂದು ಹೇಳಲಾಗಿ, ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ನಿಶ್ವಿಕಾ ಅಚ್ಚ ಕನ್ನಡತಿ. ಸ್ಯಾಂಡಲ್‍ವುಡ್‍ಗೆ ಕನ್ನಡ ನಟಿಯನ್ನು ಪರಿಚಯಿಸಿದ ಖುಷಿ ಇದೆ ಅಂತ ಹೇಳುವಾಗ ಶಿಳ್ಳೆ ಸದ್ದು ಕೇಳಿಬಂತು. ಗೆಳಯನಿಗೆ ಶುಭಹಾರೈಸಲು ಕರ್ವ, ಅಖಿರಾ ನಿರ್ಮಾಪಕರು, ನಟಿ ಕೃಷಿ ತಾಪಂಡ, ನಿರ್ದೇಶಕರುಗಳಾದ ಡಾ.ಸೂರಿ, ಅನಿಲ್‍ಕುಮಾರ್, ನವೀನ್‍ರೆಡ್ಡಿ, ಅಜಿತ್ ಮುಂತಾದವರು ಆಗಮಿಸಿದ್ದರು. ಸಂಗೀತ ಅಜನೀಶ್ ಲೋಕನಾಥ್, ಛಾಯಾಗ್ರಹಣ ದಿಲೀಪ್ ಚಕ್ರವರ್ತಿ, ಸಂಕಲನ ಶ್ರೀಕಾಂತ್, ಸಾಹಸ ವಿಕ್ರಂ ಮೋರ್ ಕೆಲಸ ನಿರ್ವಹಿಸಿದ್ದಾರೆ.