ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡಿದ್ರೆ ನಮ್ಮ ಕುಟುಂಬ ಹೋಗುವುದಿಲ್ಲ ಅನಿರುಧ್
ಕಳೆದ 9ವರ್ಷಗಳಿಂದ ವಿಷ್ಣು ಸ್ಮಾರಕ ನಿರ್ಮಾಣ ಸಂಬಂಧ ಹೋರಾಡುತ್ತಿದ್ದೇವೆ. ಬೆಂಗಳೂರು ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಿಸಲು 6ವರ್ಷದಿಂದ ಕಾಯುತ್ತಿದ್ದೇವೆ. ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವುದಾಗಿ ಹೇಳಿ ಮತ್ತೆ ಬೆಂಗಳೂರಿನಲ್ಲಿ ಜಾಗ ತೋರಿಸಿದರೆ ನಾವು ಒಪ್ಪುವುದಿಲ್ಲ. ಮೈಸೂರಿನಲ್ಲಿ ಗುರುತಿಸಿರುವ ಜಾಗದಲ್ಲಿ ಮಾಡಿದರೆ ಉತ್ತಮ ಎಂದಿದ್ದಾರೆ ವಿಷ್ಣುವರ್ಧನ್ ಅಳಿಯ ಅನಿರುಧ್. ಕಂಠೀರವ ಸ್ಟುಡಿಯೋ ದಲ್ಲಿ ಸ್ಮಾರಕ ನಿರ್ಮಾಣ ಮಾಡಿದರೆ ನಮ್ಮ ಕುಟುಂಬದವರು ಅಲ್ಲಿಗೆ ಹೋಗುವುದಿಲ್ಲ. ಒಂದೇ ಕಡೆ ನಿರ್ಮಿಸಿದಲ್ಲಿ ಗುಂಪಲ್ಲಿ ಗೋವಿಂದ ಎನ್ನುವಂತಾಗುತ್ತದೆ. ನಮಗೆ ಡಾ.ರಾಜ್ ಕುಮಾರ್, ಅಂಬರೀಶ್ ಅವರ ಮೇಲೆ ಗೌರವವಿದೆ. ಅದ್ರೆ ಕಂಠೀರವ ಸ್ಟುಡಿಯೋ ದಲ್ಲಿ ವಿಷ್ಣು ಸ್ಮಾರಕ ಬೇಡವೆಂದಿದ್ದಾರೆ. ಅನಿರುಧ್ ಮಾತಿಗೆ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ ನಮಗೂ ವಿಷ್ಣುವರ್ಧನ್ ರವರ ಮೇಲೆ ಗೌರವ ವಿದೆ. ನಾವು ಸ್ಮಾರಕ ನಿರ್ಮಾಣ ಮಾಡುವುದಿಲ್ಲ ಎಂದು ಹೇಳಿಲ್ಲ. ನೀವು ಮಾತನಾಡುವ ಮುನ್ನ ಎಚ್ಚರಿಕೆಯಿಂದ ಪದ ಬಳಕೆ ಮಾಡಿ ಎಂದು ಹೇಳಿದ್ದಾರೆ.