‘ಜೊತೆಜೊತೆಯಲಿ’ ಧಾರಾವಾಹಿಯಿಂದ ಹೊರ ಬರುತ್ತಾರೆಂಬ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಅನಿರುಧ್

Published on

584 Views

ಹೆಚ್ಚು ಜನಪ್ರಿಯತೆ ಪಡೆದು ನಂ.1 ಸ್ಥಾನದಲ್ಲಿರುವ ಜೀ ಕನ್ನಡದಲ್ಲಿ ಒಂದು ವರ್ಷದಿಂದ ಯಶಸ್ವಿಯಾಗಿ ಮುಂದುವರೆಯುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಎಷ್ಟು ಜನಪ್ರಿಯತೆ ಪಡೆದಿದೇಯೋ ಅಷ್ಟೇ ಜನಪ್ರಿಯತೆ ಹಾಗೂ ಸಾಕಷ್ಟು ಅಭಿಮಾನಿಗಳು ಪಡೆದವರು ‘ಜೊತೆಜೊತೆಯಲಿ’ ಧಾರಾವಾಹಿಯ ಆರ್ಯವರ್ಧನ್ ಪಾತ್ರಧಾರಿ ಅನಿರುಧ್. ಅದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಅನಿರುಧ್ ರವರು‌ ಜೊತೆಜೊತೆಯಲಿ ಧಾರಾವಾಹಿಯಿಂದ ಹೊರ ಬರುತ್ತಿದ್ದಾರೆ ಎಂಬ ವಿಷಯ ಕೇಳಿಬರುತ್ತಿದ್ದು, ಕನ್ನಡದ ಬಿಗ್ ಬಾಸ್ ನಲ್ಲಿ ಅನಿರುಧ್ ಭಾಗವಹಿಸುತ್ತಿದ್ದಾರೆಂಬ ಊಹಾಪೋಹಗಳು ಕೇಳಿ ಬರುತ್ತಿದ್ದೆ.

ಈ ವಿಷಯವಾಗಿ ಅನಿರುಧ್ ರವರೇ ವಿಡಿಯೋ ಮೂಲಕ ಈ ಎಲ್ಲ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ನಾನು ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಹೊರಬರುತ್ತಿಲ್ಲ. ಯಾವುದೇ ಬೇರೆ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿಲ್ಲ. ಎಂದು ಸ್ಪಷ್ಟಪಡಿಸಿದ್ದಾರೆ. ಧಾರಾವಾಹಿಯಿಂದ ಆರ್ಯವರ್ಧನ್ ಹೊರ ಬರುತ್ತಾರೆಂಬ ವಿಷಯ ತಿಳಿದ ಅವರ ಅಭಿಮಾನಿಗಳು ಆರ್ಯವರ್ಧನ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬೇಸಾರ ವ್ಯಕ್ತ ಪಡಿಸಿದ್ದರು. ಈಗ ಅನಿರುಧ್ ರವರ ಮಾತು ಕೇಳಿ ಖುಷಿಪಟ್ಟಿದ್ದಾರೆ ಅವರ ಅಭಿಮಾನಿಗಳು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com