ರಾಜ್ಯದ ಸಿಎಂ ಯಡಿಯೂರಪ್ಪ ನವರಿಗೆ ಮನವಿ‌ ಮಾಡಿದ ನಟ ಅನಿರುಧ್

Published on

577 Views


ಜೊತೆ ಜೊತೆಯಲಿ ಸೀರಿಯಲ್ ಮೂಲಕ ಸಾಕಷ್ಟುಅಭಿಮಾನಿಗಳನ್ನು ಪಡೆದಿರುವ ನಟ ಅನಿರುಧ್ ರವರು ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಸ್ಥಳೀಯ ಸಮಸ್ಯೆಗಳು ಸರಕಾರದ ಗಮನಕ್ಕೆ, ಬಿಬಿಎಂಪಿ ಗಮನಕ್ಕೆ ಬರುವಂತೆ ಮಾಡಿ, ಕೆಲವೊಂದು ಸ್ಥಳೀಯ ಸಮಸ್ಯೆಗೆ ಬಿಬಿಎಂಪಿ ಅವರು ಸ್ಪಂದಿಸಿ ಕೆಲವು ಕೆಲಸಗಳನ್ನು ಮಾಡಿರುವ ವಿಷಯ ನಮ್ಮಗೆಲ್ಲಾ ತಿಳಿದಿದೆ.


ಇದೀಗ ನಟ ಅನಿರುಧ್ ರವರು ನಮ್ಮ ಸಿಎಂ ಯಡಿಯೂರಪ್ಪ ನವರಿಗೆ ಒಂದು ಮನವಿ ಕಳುಹಿಸಿದ್ದಾರೆ. ‘ನಮ್ಮ ರಾಜ್ಯದಲ್ಲಿರುವ ತೆರೆದ ಕಾಳುವೆಗಳನ್ನು ಸೌರ ಫಲಕಗಳಿಂದ ಮುಚ್ಚಿ ಗುಜರಾತ್ ಮಾದರಿಯ ವಿದ್ಯುತ್ಚಕ್ತಿ ಉತ್ಪಾದನೆಗೆ ಸೌರಫಲಕಗಳನ್ನು ಬಳಸಬಹುದು ಮತ್ತು ಎರಡು ಬದಿಯಲ್ಲಿ ಗೋಡೆಗಳನ್ನು ಕಟ್ಟಿ ಅವುಗಳ ಮೇಲೆ ವರ್ಟಿಕಲ್ ಗಾರ್ಡನಿಂಗ್ ಮಾಡಬಹುದು’ ಎಂಬ ಸಲಹೆ ರಾಜ್ಯದ ಮುಖ್ಯಮಂತ್ರಿಗೆ ನೀಡಿದ್ದಾರೆ. ಗುಜರಾತ್ ಸಿಎಂ ವಿಜಯ್ ರೂಪಾಣಿ ಈಗಾಗಲೇ ‌ಈ ಕೆಲಸ ಆರಂಭಿಸಿದ್ದು, ನಮ್ಮಲ್ಲೂ ಅದೇ ಮಾದರಿ ಬರಲಿ ಎಂಬ ಅನಿರುಧ್ ಮನವಿಗೆ ಸಿಎಂ ಯಾವ ರೀತಿ‌ ಸ್ಪಂದಿಸಲಿದ್ದಾರೆ ಕಾದು ನೋಡಬೇಕು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com