ಮುಂಗಾರು ಮಳೆ ಕಲರು.. ಗಾಳಿಪಟ ಫ್ಲೇವರು… “ಅಂದವಾದ” ಟ್ರೈಲರು…!!!!!

Published on

518 Views

ಹಾಡುಗಳಿಂದ ಗಮನ ಸೆಳೆದಿದ್ದ ಅಂದವಾದ ಚಿತ್ರದ ಟ್ರೈಲರ್ ಲಾಂಚ್ ಆಗಿದೆ.. ಅಂದವಾದ ಟ್ರೈಲರ್ ಎಲ್ಲಾ ಆಂಗಲ್ ನಿಂದ್ಲೂ ಇಂಪ್ರೆಸೀವ್ ಆಗಿದೆ… ಔಟ್ ಅಂಡ್ ಔಟ್ ಲವ್ ಥೀಮ್ ಇರೋ ಈ ಸಿನಿಮಾ ಮೇಕಿಂಗ್ ಸ್ಟೈಲ್ , ಸ್ಟಾರ್ ಕಾಸ್ಟ್ ಮತ್ತು ಮ್ಯೂಸಿಕ್, ಸ್ಯಾಂಡಲ್ ವುಡ್ ನ ರೊಮ್ಯಾಂಟಿಕ್ ಡ್ರಾಮಾ ಜಾನರ್ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದ ಮುಂಗಾರುಮಳೆ ಮತ್ತು ಗಾಳಿಪಟ ಚಿತ್ರಗಳಂತೆ ಭಾಸವಾಗ್ತಿದೆ..


ಕರ್ನಾಟಕದ ಹಚ್ಚಹಸಿರಿನಲ್ಲಿ ಚಿತ್ರೀಸಿರೋ ಅಂದವಾದ ಚಿತ್ರದ ಕಥೆ ಸಂಪೂರ್ಣ ಸಾಗೋದು ಮಳೆ, ಮಂಜು ಮತ್ತು ಹಸಿರ ಬ್ಯಾಕ್ ಡ್ರಾಪ್ ನಲ್ಲಿ, ಇಡೀ ಸಿನಿಮಾ ಕಣ್ಣಿಗೆ ತಂಪು ನೀಡೋದ್ರ ಜೊತೆಗೆ, ಮನಸಿಗೆ ಮುದ ಕೊಡುವಂತಿದೆ…ನವ ಪ್ರತಿಭೆ ಜೈ ನಾಯಕ ನಟನಾಗಿ ನಟಿಸಿರೋ ಈ ಚಿತ್ರದಲ್ಲಿ ಅನುಷಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.. ಚಲ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಸಿನಿಮಾವನ್ನ ಮಧುಶ್ರೀ ಗೋಲ್ಡನ್ ಫ್ರೇಮ್ಸ್ ನಿರ್ಮಾಣ ಮಾಡಿದೆ.. ವಿಕ್ರಮ್ ವರ್ಮನ್ ಸಂಗೀತ ಸಂಯೋಜನೆಯ ಅಂದವಾದ ಚಿತ್ರದ ಹಾಡುಗಳು ಮಾಧುರ್ಯ ಭರಿತವಾಗಿದ್ದು, ಟ್ರೈಲರ್ ನಲ್ಲಿರೋ ಒಂದು ಮ್ಯಾಸಿಕ್ ಬಿಟ್ ಸಖತ್ ಅಟ್ರ್ಯಾಕ್ಟೀವ್ ಆಗಿದೆ.. ಅಂದ್ಹಾಗೆ ಈ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರ್ತಿದೆ..

Copyright ©2026 . All Rights Reserved. privacy | terms Whatsapp: 9538193653 Email: hello@flixoye.com