ಮತ್ತೆ “ಡಾಲಿ” ಅವತಾರವೆತ್ತಿದ ಧನಂಜಯ್

Published on

410 Views

ಕನ್ನಡ ಚಿತ್ರರಂಗದಲ್ಲಿ ಕಳೆದ ವರ್ಷ ಸಂಚಲನ ಮೂಡಿಸಿದ ಖಳಪಾತ್ರ
ಡಾಲಿ. ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದ ಧನಂಜಯ್ ಡಾಲಿಯಾಗಿ ಜಗದ್ವಿಖ್ಯಾತಿ ಪಡೆದುಕೊಂಡರು.‌
ಎಷ್ಟರ ಮಟ್ಟಿಗೆ ಎಂದರೆ ಧನಂಜಯ್ ಎಂಬ ಹೆಸರನ್ನೇ ಮರೆತು
ಎಲ್ಲರೂ ಡಾಲಿ ಎಂದು ಕರೆಯಲು ಶುರುಮಾಡಿದರು. ಈಗ ಇದೇ ಹೆಸರನ್ನು ಅವರು ಅಭಿನಯಿಸಲಿರುವ ಮುಂದಿನ ಚಿತ್ರದ ಶೀರ್ಷಿಕೆಯನ್ನಾಗಿ ಇಡಲಾಗಿದೆ.


ಈ ಹಿಂದೆ ಧನಂಜಯ್ ಅಭಿನಯಿಸಿದ್ದ ಎರಡನೇ ಸಲ ಚಿತ್ರವನ್ನು ನಿರ್ಮಾಣ ಮಾಡಿದ್ದ ಯೋಗೀಶ್ ನಾಯರಣ್ ಅವರು ಯೋಗೀಶ್ ಮೋಷನ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರವನ್ನು ಪ್ರಭು ಶ್ರೀನಿವಾಸ್ ಅವರು ನಿರ್ದೇಶನ ಮಾಡಲಿದ್ದಾರೆ.
ನೆನ್ನೆಯಿಂದ ಡಾಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಶುರುವಾಗಿವೆ. ಸದ್ಯದಲ್ಲೇ ಚಿತ್ರದ ಮಹೂರ್ತ ಹಾಗೂ ಚಿತ್ರೀಕರಣ ಶುರುವಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com