“ರಣರಣಕ”ದಲ್ಲೊಂದು ಶೃಂಗಾರದ ಗೀತೆ ಸದ್ಯದಲ್ಲೇ ನಿಮ್ಮ ಮುಂದೆ

Published on

840 Views

ಯೋಗರಾಜ್ ಭಟ್ ಅವರು ನಿರ್ದೇಶನ ಮಾಡಿರುವ ಪಂಚತಂತ್ರ
ಚಿತ್ರದಲ್ಲಿ ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ ಎಂಬ ಶೃಂಗಾರದ ಗೀತೆ
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ YouTube ಗಳಲ್ಲಿ ಸಖತ್ ವೈರಲ್ ಆಗಿ ಪಡ್ಡೆಗಳ ನಿದ್ದೆ ಕೆಡಿಸಿತ್ತು. ಈಗ ಅಂತಹುದೇ ಮತ್ತೊಂದು ಗೀತೆ ಸದ್ಯದಲ್ಲೇ ತೆರೆಗೆ ಬರಲಿರುವ ರಣರಣಕ ಚಿತ್ರದಲ್ಲಿ ಇದೆಯಂತೆ ಆ ಹಾಡು ಕರಾವಳಿಯ ಬೀಜ್ ನಲ್ಲಿ ಸಖತ್ ಹಾಟ್ ಆಗಿ ಚಿತ್ರೀಕರಣ ಮಾಡಲಾಗಿದ್ದು ಈ ವಿಡಿಯೋ ಸಾಂಗ್ ಚಿತ್ರತಂಡದವರು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದಾರೆ.


ಈ ಹಾಡಿಗೆ ರಾಜೇಶ್ ರಾಮನಾಥನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ನಿಶ್ಚಿತ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎನ್.ದಿವಾಕರ್ ಅವರು ಕಥೆ ಸಾಹಿತ್ಯ ಬರೆದು ನಿರ್ಮಾಣ ಮಾಡಿರುವ ಈ ಚಿತ್ರವನ್ನು ಸುಧಾಕರ್ ಬನ್ನಂಜೆ ಅವರು ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರವು ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com