ನಾಳೆ ತೆರೆಗೆ ಬರಲಿದೆ ‘ಅಮೃತ ಘಳಿಗೆ’

Published on

513 Views

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪದ್ಮಾವಸಂತಿ, ರಾಮಕೃಷ್ಣ, ಶ್ರೀಧರ್ ಅಭಿನಯದ 1984ರಲ್ಲಿ ತೆರೆಕಂಡ ಚಿತ್ರ ‘ಅಮೃತಘಳಿಗೆ’ ಯಶಸ್ಸು ಕಂಡ ಸಿನಿಮಾ. ಈಗ ಅದೇ ಹೆಸರಿನಲ್ಲಿ ಅಶೋಕ್ ಕಡಬ ನಿರ್ದೇಶನದಲ್ಲಿ ಸಂಹಿತಾ ವಿನ್ಯ, ನೀತುಶೆಟ್ಟಿ, ದತ್ತಣ್ಣ, ಶೃಂಗೇರಿ ರಾಮಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಅಮೃತ ಘಳಿಗೆ’ ಸಿನಿಮಾದ ಚಿತ್ರೀಕರಣ ಮಲೆನಾಡಿನ ಸುತ್ತಮುತ್ತ ಪರಿಸರದಲ್ಲಿ ನಡೆದಿದ್ದು, ಚಿತ್ರದ ಕಥೆಯೂ ಒಬ್ಬ ಬಂಜೆಯನ್ನು ಜನರು ನೋಡುವ‌ ರೀತಿ, ಅವಳು ಅವಮಾನಗಳಿಗೆ ಒಳಗಾಗಿ ಹೇಗೆಲ್ಲಾ ನೋವನ್ನು ಅನುಭವಿಸುತ್ತಾಳೆ ಎಂಬುದನ್ನು ನಿರ್ದೇಶಕರು ಚಿತ್ರದಲ್ಲಿ ತೋರಿಸಿದರಂತೆ ರೂಪದರ್ಶಿ ಸಂಹಿತಾ ವಿನ್ಯಾಗೆ ಇದು ಎರಡನೇಯ ಚಿತ್ರವಾಗಿದು, ಈ ಚಿತ್ರದಲ್ಲಿ ಬಂಜೆಯ ಪಾತ್ರದಲ್ಲಿ ಅಭಿನಯಿಸಿದ್ದು, ಶೃಂಗೇರಿ ರಾಮಣ್ಣ ತಂದೆ ಪಾತ್ರದಲ್ಲಿ ನಟಿಸಿದ್ದಾರೆ. ಕಾರ್ತಿಕ್ ವೆಂಕಟೇಶ್ ಚಿತ್ರಕ್ಕೆ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com