ಅಮ್ಮನ ಮನೆ ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ

Published on

450 Views

ಆತ್ಮೀಯರೇ..

ಇದೇ ಶನಿವಾರ,ಜನವರಿ 12 ಸಂಜೆ 4 ಘಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ನಾನು ನಟಿಸಿರುವ ಎರಡನೇ ಚಿತ್ರ ” ಅಮ್ಮನ ಮನೆ ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ನನ್ನ ಅಚ್ಚುಮೆಚ್ಚಿನ ನಟರಲ್ಲೊಬ್ಬರಾದ ಚಂದನವನದ ಫೀನಿಕ್ಸ್ ಸ್ಟಾರ್ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ಈ ಚಿತ್ರದಲ್ಲಿ ನಟಿಸುವ ಸದವಕಾಶ ಅನಿರೀಕ್ಷಿತವಾಗಿ ನನ್ನದಾಯಿತು.


ಅವಳೇ ನನ್ನ ಹೆಂಡ್ತಿ,ಅವನೇ ನನ್ನ ಗಂಡ,ತುಂಬಿದ ಮನೆ,ಎಲ್ಲರಂಥಲ್ಲ ನನ್ನ ಗಂಡ ಮುಂತಾದ ಉತ್ತಮ ಕೌಟುಂಬಿಕ ಚಿತ್ರಗಳನ್ನು ಕೊಟ್ಟಿರುವ ಹಿರಿಯ ನಿರ್ದೇಶಕ ಶ್ರೀ ಎಸ್.ಉಮೇಶ್ ಅವರ ನಿರ್ದೇಶನದ 24 ನೇ ಚಿತ್ರ ” ಮದುವೆ ದಿಬ್ಬಣ ” ಮೂಲಕ ಕಳೆದ ವರ್ಷ ನಾನು ತೆರಂಗೇಟ್ರಂ ಮಾಡಿದ್ದು ನಿಮಗೆಲ್ಲ ಗೊತ್ತಿರುವ ವಿಷಯ.
ಅದಾದ ನಂತರ,ಹಜ್,ರಿಸರ್ವೇಶನ್,ಗೆರೆಗಳು ಮುಂತಾದ ಗಂಭೀರ ಕಥಾವಸ್ತುವಿನ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ನಿಖಿಲ್ ಮಂಜು ಅವರ ನಿರ್ದೇಶನದಲ್ಲಿ ಅಮ್ಮನ ಮನೆ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ನನ್ನ ಸುಯೋಗ.

ಟೀಮ್ ಆರ್.ಎಮ್.ಜಿ.ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಚಿತ್ರತಂಡದ ಪರವಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.

ಜನವರಿ 12 ಶನಿವಾರ ಸಂಜೆ 4 ಘಂಟೆಗೆ ಕಲಾವಿದರ ಸಂಘದಲ್ಲಿ ಸಿಗೋಣ ಗೆಳೆಯರೆ…

DrRm Guruji

Copyright ©2026 . All Rights Reserved. privacy | terms Whatsapp: 9538193653 Email: hello@flixoye.com