ಮತ್ತೆ ಒಂದಾದ್ರು ಅಂಬಿ ಹಾಗೂ ಭಟ್ರು

Published on

271 Views

ನಟ ಅಂಬರೀಶ್ ಒಂದು ಕಡೆ ತಮ್ಮ ಮಗ ಅಭಿಷೇಕ್ ಅವರನ್ನು ‘ಅಮರ್’ ಸಿನಿಮಾದ ಮೂಲಕ ಲಾಂಚ್ ಮಾಡುತ್ತಿದ್ದಾರೆ. ಇನ್ನೊಂದು ಕಡೆ ತಾವು ‘ಅಂಬಿ ನಿಂಗೆ ವಯಸ್ತಾಯ್ತೋ’ ಸಿನಿಮಾದಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾದ ನಂತರ ಮತ್ತೊಂದು ಹೊಸ ಸಿನಿಮಾದ ಹಾಡಿನಲ್ಲಿ ಅಂಬರೀಶ್ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ ತಮ್ಮ ‘ಪಂಚತಂತ್ರ’ ಸಿನಿಮಾದಲ್ಲಿ ಒಂದು ವಿಶೇಷ ಹಾಡನ್ನು ಪ್ಲಾನ್ ಮಾಡಿದ್ದಾರೆ. ತಮ್ಮ ಈ ಹಾಡಿಗೆ ಅಂಬರೀಶ್ ಕುಣಿಯಬೇಕು ಎನ್ನುವುದು ಭಟ್ಟರ ಆಸೆ ಆಗಿದೆ. ಈ ಬಗ್ಗೆ ಯೋಗರಾಜ್ ಭಟ್ ಈಗಾಗಲೇ ಅಂಬರೀಶ್ ಅವರ ಜೊತೆ ಮಾತುಕತೆ ನಡೆಸಿದ್ದಾರಂತೆ. ಅಂಬಿ ಓಕೆ ಎಂದ ತಕ್ಷಣ ಹಾಡಿನ ಚಿತ್ರೀಕರಣ ನಡೆಯಲಿದೆ ಅನ್ನೋ ಮಾತುಗಳು ಕೇಳಿಬರ್ತಾ ಇವೆ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com