ಅಂಬೇಡ್ಕರ್ ಜೀವನಾಧರಿತ ಚಿತ್ರ ‘ ಧಾಂಗಡಿ’
‘ ಧಾಂಗಡಿ’ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನಾಧರಿತ ಚಿತ್ರ ಇದಾಗಿದ್ದು, ಮೊನ್ನೆ ಈ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು.
ಅಂಬೇಡ್ಕರ್ ರ ಜೀವನ ಹಾಗೂ ಹೋರಾಟ , ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಅವರು ಕೈಗೊಂಡ ಯೋಜನೆಗಳು ಮತ್ತು ಅಂಬೇಡ್ಕರ್ ರ ಕನಸುಗಳನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ ಎಂದರು ‘ಧಾಂಗಡಿ’ ಚಿತ್ರದ ನಿರ್ದೇಶಕ ಶರತ್. ಬೆಳಗಾವಿ ಸುತ್ತ ಮುತ್ತ ಚಿತ್ರದ ಚಿತ್ರೀಕರಣ ನಡೆಸಿದ್ದು, ಅಮಾವಾಸ್ಯೆಯ ದಿನ ಚಿತ್ರದ ಚಿತ್ರೀಕರಣ ಪ್ರಾರಂಭ ಮಾಡಿ ಅಮಾವಾಸ್ಯೆಯ ದಿನದಂದೇ ಕುಂಬಳಕಾಯಿ ಒಡೆದದ್ದು ಚಿತ್ರದ ವಿಶೇಷವಾಗಿದೆ. ಡಾ.ಅಂಬೇಡ್ಕರ್ ಪಾತ್ರದಲ್ಲಿ ನಟಿಸಿರುವ ಡಾ.ಸಿದ್ರಾಮ ಕಾರಣಿಕ ಅವರೇ ಚಿತ್ರದ ಕತೆ, ಚಿತ್ರಕತೆ ಬರೆದಿದ್ದಾರೆ.
ಅಂಬೇಡ್ಕರ್ ಜೀವನ ಸಿದ್ಧಾಂತ ಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವ ನಾಯಕನ ಪಾತ್ರದಲ್ಲಿ ಸಂಜು ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಶರತ್ ಅವರಿಗೆ ಇದು ನಾಲ್ಕನೇ ಸಿನಿಮಾವಾಗಿದ್ದು, ತಾರಾಬಳಗದಲ್ಲಿ ಬಿರಾದಾರ, ಕೆ.ಶರತ್, ಕನಕಲಕ್ಷ್ಮೀ, ಡಾ.ಸವಿತಾ, ಬೀಮಪ್ಪ ಗಡಾದ, ಜಯಸೂರ್ಯ, ರಾಘವೇಂದ್ರ, ಮಹೇಶ್ ವಾಲಿ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು , ಪ್ರಮೋದ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ದೀಪು ಛಾಯಾಗ್ರಹಣವಿದ್ದು, ರಾಜಶೇಖರ ರೆಡ್ಡಿ ಸಂಕಲನ ಚಿತ್ರಕ್ಕಿದೆ.