ಅಂಬರೀಶ್ ನಿಧನರಾದ ಸುದ್ಧಿ ತಿಳಿಯಲೇ ಇಲ್ಲ ಎಂದ ನಟಿ…!!!

Published on

356 Views


ಅಂಬರೀಶ್ ರವರು ನಿಧನರಾಗಿ ಇಂದಿಗೆ 7 ದಿನಗಳು ಕಳೆದಿದೆ. ಅವರನ್ನು ಕಳೆದುಕೊಂಡ ದುಃಖ ಇನ್ನು ಮಾಸಿಯೇ ಇಲ್ಲ. ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ಇಂಡಸ್ಟ್ರಿಯಿಂದಲೂ ಅಂಬಿ ಸಾವಿನ ಸುದ್ದಿ ಕೇಳಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಅನೇಕ ಗಣ್ಯರು ,ರಾಜಕೀಯ ವ್ಯಕ್ತಿಗಳು ,ಸ್ಟಾರ್ ನಟರು ಅಂಬಿಗೆ ಅಂತಿಮ ನಮನ ಸಲ್ಲಿಸಿದರು. ಅದರೆ ಕನ್ನಡದ ನಟಿ ಹರ್ಷಿಕಾ ಪೂಣಚ್ಚಗೆ ಮಾತ್ರ ಅಂಬಿ ಅಂಕಲ್ ಸತ್ತಿರುವ ವಿಷಯವೇ ಗೊತ್ತಿರಲ್ವಂತೆ. ಅವರು ನವೆಂಬರ್ 23ರಂದು ನೆಟ್ವರ್ಕ್ ಇಲ್ಲದ ಜಾಗದಲ್ಲಿ ಶೂಟಿಂಗ್ ನಲ್ಲಿ ಇದ್ದೆವು. ಇವತ್ತೇ ವಿಷಯ ತಿಳಿಯಿತು. ನಾನು ತುಂಬಾ ದುರಾದೃಷ್ಟವಂತೆ, ಕೊನೆಯದಾಗಿ ನೋಡುವ ಅವಕಾಶವೂ ನನಗೆ ಸಿಕ್ಕಿಲ್ಲ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಬರೆದುಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com