ಮೀಟೂ ವಿಥ್ ಪೈಟೂ ಚಿತ್ರದ ಮೂಲಕ ಅಂಬಾರಿ ಸುಪ್ರಿಯಾ ಅವರ ಸೆಕೆಂಡ್ ಇನ್ನಿಂಗ್ಸ್ ಶುರು

Published on

619 Views

ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಲೂಸ್ ಮಾದ ಯೋಗೀಶ್
ನಾಯಕನಾಗಿ ಕಾಣಿಸಿಕೊಂಡಿದ್ದ ಅಂಬಾರಿ ಚಿತ್ರದ ಮೂಲಕ
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸುಪ್ರಿಯಾ ಅವರು ನಂತರ
ಬೆರಳೆಣಿಕೆಯ ಚಿತ್ರಗಳಲ್ಲಿ ಮಾಯವಾಗಿದ್ದರು. ಈಗ ಮತ್ತೆ ಸೆಕೆಂಡ್
ಇನ್ನಿಂಗ್ಸ್ ಶುರುಮಾಡಲಿದ್ದಾರೆ.‌ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ
ಸಂಯುಕ್ತಾ ಹೆಗ್ಡೆ ಅವರನ್ನು ಕನ್ನಡದ ಸನ್ನಿಲಿಯೋನ್ ಎಂದು ಹೇಳಿ
ಸುದ್ದಿಯಾಗಿದ್ದ ಯುವ ನಿರ್ದೇಶಕ ಕೀರ್ತನ್ ಶೆಟ್ಟಿ ಅವರು ನಿರ್ದೇಶನ
ಮಾಡಲಿರುವ “ಮಿಟೂ ವಿಥ್ ಫೈಟೂ’ ಎಂಬ ಚಿತ್ರದಲ್ಲಿ ಸುಪ್ರಿಯಾ ಅವರು ನಟಿಸಿದ್ದಾರೆ. ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದಲ್ಲಿ ಸಂಚಲನ ಉಂಟು ಮಾಡಿದ್ದ ಮೀಟು ವಿವಾದವನ್ನು ಕೇಂದ್ರೀಕರಿಸಿ ಕಥೆ ಬರೆದಿರುವ ಕೀರ್ತನ್ ಅವರು.


ಮೀಟೂ ವಿವಾವದಲ್ಲಿ ಸುದ್ದಿಯಾಗಿದ್ದ ತೆಲುಗು ನಟಿ‌ ಶ್ರೀ ರೆಡ್ಡಿ ಅವರನ್ನು ಈ ಚಿತ್ರಕ್ಕಾಗಿ ಕರೆತರಲಿದ್ದಾರೆ. ಹೊಸವರ್ಷದಲ್ಲಿ ಈ ಚಿತ್ರ ಶುರುವಾಗಲಿದ್ದು ಸದ್ಯ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಮೂಲಕ ಮತ್ತೊಂದು ಇನ್ನಿಂಗ್ಸ್ ಪ್ರಾರಂಭಿಸಿರುವ ಸುಪ್ರಿಯಾ ಅವರಿಗೆ ಈ‌ ಚಿತ್ರ ಯಶಸ್ಸು ತರಲಿ ಎಂದು ಶುಭ ಹಾರೈಸೋಣ.‌

Copyright ©2026 . All Rights Reserved. privacy | terms Whatsapp: 9538193653 Email: hello@flixoye.com