ರೆಬೆಲ್ ಸ್ಟಾರ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ “ಅಮರ್” ಉಡುಗೊರೆ

Published on

251 Views

ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ರೆಬಲ್ ಸ್ಟಾರ್ ಅಂಬರೀಶ್
ಅವರ ಪುತ್ರ ಅಭಿಷೇಕ್ ನಾಯಕನಾಗಿ ಭರ್ಜರಿಯಾಗಿ ಎಂಟ್ರಿಕೊಡುತ್ತಿರುವ
ಅಮರ್ ಚಿತ್ರವು ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ‌. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳು ಆ ನಿರೀಕ್ಷೆಯನ್ನು
ಮತ್ತಷ್ಟು ಹೆಚ್ಚಿಸಿ ಅಭಿಮಾನಿಗಳನ್ನು ಕಾತುರದಿಂದ ಕಾಯುವಂತೆ ಮಾಡಿದೆ.
ಅಂದ ಹಾಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟು ಹಬ್ಬದ
ಸವಿನೆನೆಪಿಗಾಗಿ ಈ ಚಿತ್ರವು ಬಿಡುಗಡೆ ಮಾಡಲಿದ್ದಾರೆ. ರೆಬೆಲ್
ಅಭಿಮಾನಿಗಳಿಗೆ ಈ ಚಿತ್ರವು ಒಲವಿನ ಉಡುಗೊರೆಯಾಗಲಿದೆ.
ಟೀಸರ್ ನಲ್ಲಿ ಅಭಿಷೇಕ್ ಯಂಗ್ ರೆಬೆಲ್ ಸ್ಟಾರ್ ಆಗಿ ಸಖತ್ ಆಗಿ
ಮಿಂಚಿದ್ದಾರೆ.ಈ ಚಿತ್ರದ ಟೀಸರ್ ಆನಂದ್ ಆಡಿಯೋ ಯೂ ಟ್ಯೂಬ್
ಚಾನಲ್ ನಲ್ಲಿ ಬಿಡುಗಡೆಯಾಗಿದ್ದು ನೋಡುಗರ ಮೆಚ್ವುಗೆ ಪಡೆಯುತ್ತಿದೆ.
ನಾಗಶೇಖರ್ ಅವರು ನಿರ್ದೇಶನ ಮಾಡಿರುವ ಈ ಚಿತ್ರವನ್ನು
ಸಂದೇಶ್ ನಾಗರಾಜ್ ಅವರು ನಿರ್ಮಾಣ ಮಾಡಿದ್ದಾರೆ.
ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಹೆಗಡೆ ಅವರ ಛಾಯಗ್ರಹಣ ದೀಪು.ಎಸ್‌.ಕುಮಾರ್ ಅವರ
ಸಂಕಲನ ಇಮ್ರಾನ್ ಸರ್ದಾರಿಯಾ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಟೀಸರ್ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com