ಆಲ್ ಓಕೆ “ನೋ ಫಿಯರ್” ಹಾಡು ಸಕ್ಕತ್ ಸೌಂಡ್….

Published on

532 Views

ಕನ್ನಡ ಹಾಡುಗಳ ಗುಣಮಟ್ಟ ಯಾವ ಅಂತರಾಷ್ಟ್ರೀಯ ಮಟ್ಟದ ಹಾಡುಗಳಿಗೆ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಮಾಡುವಂತಿದೆ ಆಲ್ ಓಕೆ ಯ “ನೋ ಫಿಯರ್” ಹಾಡು.

ಕನ್ನಡ ರ್ಯಾಪ್ ಲೋಕದ ನಂಬರ್ ಒನ್ ಹಾಡುಗಾರ ಮ್ಯೂಸಿಕ್ ಕಂಪೋಸರ್ ಆಲ್ ಓಕೆ ( ಅಲೋಕ್ ಬಾಬು), ತಮ್ಮ ಹಾಡುಗಳ ಮೂಲಕ ಪ್ರತಿ ಬಾರಿಯೂ ಹೊಸದಾಗಿ, ಹೊಸತನದಿಂದ ಕನ್ನಡಿಗರ ಮನ ಮನಸ್ಸು ಗೆಲ್ಲುತ್ತಾ ತಮ್ಮನ್ನೆಲ್ಲಾ ರಂಜಿಸುತ್ತಾ ಬಂದಿದ್ದಾರೆ. ಸಾಕಷ್ಟು ಹಿಟ್ ಹಾಡುಗಳ ನಂತರ, ಅಂತಾರಾಷ್ಟ್ರೀಯ ಮಟ್ಟದ ಹಾಡುಗಳಿಗೆ ಪೈಪೋಟಿ ನೀಡುವಂತೆ, ಮತ್ತೊಂದು ಹಾಡು ಚರ್ಚೆಯಲ್ಲಿದೆ.

ಕೀರ್ತಿ ರೂಪನ್ ಗುಂಡಿ ಎಂಬ ಹೊಸ ಪ್ರತಿಭೆ ಪರಿಚಯಿಸುವುದು ಮೂಲಕ, ನೋ ಫಿಯರ್ ಹಾಡನ್ನು ಕನ್ನಡ ಜನತೆಗೆ ಅರ್ಪಿಸಿದ್ದಾರೆ. ಸಾಧನೆ ಮಾಡುವಾಗ ಭಯ ಬಿಡಬೇಕು ಎಂಬ ಅತ್ಯುತ್ತಮ ಸಂದೇಶದ ಮೂಲಕ ಈಗಿನ ಯುವಕರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಅಲೋಕ್ ಸಾಹಿತ್ಯಕ್ಕೆ ಜೊತೆಯಾಗಿ ಪ್ರಮೋದ್ ಮರವಂತೆ ಸಹ ಬರೆದಿದ್ದಾರೆ. ಎಂದಿನಂತೆ ತಮ್ಮ ಹಾಡುಗಳಲ್ಲಿ ಭರವಸೆ ಮೂಡಿಸುವ, ಶಕ್ತಿ ತುಂಬಿಸುವ ಅಲೋಕ್ , ಈ ಹಾಡಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ತಾಂತ್ರಿಕತೆಯಲ್ಲೂ ಶಬ್ಬಾಷ್ ಗಿರಿ ಪಡೆದುಕೊಂಡಿದ್ದಾರೆ.

ಸುಮಾರು ವರ್ಷಗಳಿಂದ ಪಬ್ ಗಳಲ್ಲಿ ಕನ್ನಡ ಹಾಡು ಹಾಕ್ದೆ ಇರೋದು ನಮ್ಮೆಲ್ಲರ ದೌರ್ಭಾಗ್ಯವೇ ಸರಿ. ಇಂತಹ ಹಾಡು ಹಾಕಿ ಹಾಕಿ ಅಂತ ಅವರನ್ನ ಬೇಡುವ ಸಮಯದಲ್ಲಿ ಈ ತರಹದ ಹಾಡುಗಳು ಈ ಹೋರಾಟಕ್ಕೆ ಪುಷ್ಠಿ ಕೊಡುತ್ತವೆ. ಪಬ್ ಮಾಲೀಕರಿಗೆ ಈ ಹಾಡುಗಳು ತೋರಿಸುವ ಪ್ರಯತ್ನ ಆಗಲಿ. ಆಗಲಾದರೂ ಕನ್ನಡ ಹಾಡುಗಳಿಗೆ ಪಬ್ ಗಳಲ್ಲಿ ಮನ್ನಣೆ ಸಿಗಲಿದೆಯಾ ನೋಡಬೇಕು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com