ಕ್ರೇಜಿಯಾಗಿ ಮುನ್ನುಗ್ಗುತ್ತಿದೆ ಆಲ್ ಓಕೆ ಹಾಡು..

Published on

612 Views

ಕನ್ನಡದಲ್ಲಿ ಸದ್ಯ ರ್ಯಾಪರ್ ಗಳ ಪೈಕಿ ನಂಬರ್ ಒನ್ ಸ್ಥಾನದಲ್ಲಿರುವ ಪ್ರತಿಭೆ ಅಂದ್ರೆ ಅದು ಅಲೋಕ್ (ಆಲ್ ಓಕೆ). ಕೊನೆ ತಿಂಗಳು ಎಲ್ಲರನ್ನೂ ಹ್ಯಾಪಿಯಾಗಿಸಿದ ಹಾಡೊಂದನ್ನು ಬಿಡುಗಡೆ ಮಾಡಿ ಎಲ್ಲಾ ಕಡೆ ಟ್ರೆಂಡಿಂಗ್ ನಲ್ಲಿದ್ದ ಅಲೋಕ್ ಇವಾಗ ಮತ್ತೊಂದು ಹಾಡಿನೊಂದಿಗೆ ಸುದ್ದಿಯಲ್ಲಿದ್ದಾರೆ. ಹೌದು ಕನ್ನಡ RAP ಲೋಕದಲ್ಲಿ ಸಂಚಲನ ಮೂಡಿಸಿರೋ ಅಲೋಕ್, ಕ್ರೇಜಿ ಎಂಬ ಹಾಡಿನೊಂದಿಗೆ ಹೊಸ ವರ್ಷಕ್ಕೆ ಸ್ವಾಗತಿಸಿದ್ದು, ಎಲ್ಲಾ ಕಡೆ ಈ ಹಾಡಿನದ್ದೇ ಸೌಂಡು.

ಟೈಟಲ್ ಗೆ ತಕ್ಕಂತೆ ಕ್ರೇಜಿ ಯಾಗಿರೋ ಹಾಡು, ಅಲೋಕ್ ಆಲ್ಬಮ್ ಗಲ್ಲಿ ಒನ್ ಆಫ್ ದೀ ಬೆಸ್ಟ್ ಹಾಡು ಅಂತ ಹೇಳಬಹುದು. ಹಾಡಿಗೆ ಮತ್ತಷ್ಟು ಮೆರಗು ತಂಡಿರೋದು ನಮ್ಮ ಪವರ್ ಸ್ಟಾರ್. ಹೌದು ಹಾಡಿನ ಮೊದಲು ತಮ್ಮ ಧ್ವನಿಯ ಮೂಲಕ, ತಮ್ಮದೇ ಸ್ಟೈಲ್ ನಲ್ಲಿ ಮಾತಾಡಿದ್ದಾರೆ. ಈ ಧ್ವನಿ ಹಾಡಿಗೆ ಮತ್ತಷ್ಟು ಪವರ್ ತುಂಬಿದಂತಾಗಿದೆ. 2021 ಕ್ಕೆ ಅಲೋಕ್ ಬತ್ತಳಿಕೆಯಲ್ಲಿ ಮತ್ತಷ್ಟು ಹಾಡುಗಳು ಹೊರಬರಲಿ. ಕನ್ನಡ ಸಂಗೀತ ಪ್ರೇಮಿಗಳಿಗೆ ರಸದೌತಣ ಉಣಬಡಿಸಲಿ ಎಂಬುದೇ ನಮ್ ಆಶಯ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com