ನಗುದಾನ ಮಹದಾನ ಅಂತಿರೋ ಹ್ಯಾಪಿ ಸಾಂಗ್ ಟ್ರೆಂಡಿಂಗ್ ನಲ್ಲಿ

Published on

436 Views

ಕನ್ನಡದ ಸಂಗೀತ ಕ್ಷೇತ್ರದಲ್ಲಿ ಇತ್ತೀಚಿಗೆ ಸಾಕಷ್ಟು ಪ್ರತಿಭಾನ್ವಿತ ಗಾಯಕರು , ಮ್ಯೂಸಿಷಿಯನ್ಸ್ ಬರ್ತಿದ್ದಾರೆ. ಸ್ವತಂತ್ರವಾಗಿ ಆಲ್ಬಂಬ್ ಹಾಡುಗಳನ್ನು ಮಾಡುವವರು ಸಹ ಜಾಸ್ತಿಯಾಗಿದ್ದಾರೆ. ಎಲ್ಲೋ ಒಂದು ಕಡೆ ಆಲ್ಬಂಬ್ ಮಾಡೋವ್ರು ಜಾಸ್ತಿಯಾದಂಗೆಲ್ಲಾ ಕ್ವಾಲಿಟಿಯ ಮಟ್ಟ ಕಡಿಮೆಯಾಗ್ತಿದೆಯೆನೋ ಅನ್ನುಸ್ತಿರೋದು ನಿಜ. ಈಗಿನ ಜನರೇಷನ್ ನಲ್ಲಿ ಬೇರೆಯವರಿಗೆ ಕೌಂಟರ್ ಕೊಡೊದು, ಬೇರೆಯವರನ್ನ ಕಾಲು ಎಳೆದು ಸಾಂಗ್ ಮಾಡಿ ಮುಜುಗರ ತರಿಸುವಷ್ಟರ ಮಟ್ಟಿಗೆ ಮಾಡಿರೋದು ಉಂಟು.

ಇಂತಹ ಸಂದರ್ಭದಲ್ಲಿ ಕನ್ನಡ ಆಲ್ಬಂಬ್ ಜಗತ್ತಿದ ದೇಹದಲ್ಲೂ, ಪ್ರತಿಭೆಯಲ್ಲೂ ಧೈತ್ಯವಾಗಿ ಬೆಳೆದಿರೋ ಅಲೋಕ್ ಬಾಬ್ (All OK) ಇವಾಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಹ್ಯಾಪಿ ಅನ್ನೋ ಆಲ್ಬಂಬ್ ಹಾಡು ಈಗ ಎಲ್ಲೆಡೆ ವೈರಲ್ ಆಗಿದ್ದು, ಯೂಟ್ಯೂಬ್ ನಲ್ಲಿ ನಂಬರ್ ೧ ಟ್ರೆಂಡಿಂಗ್ ನಲ್ಲಿದೆ. ಇಲ್ಲಿ ಯಾವುದೇ ರೀತಿಯ ಗೊಂದಲ ವಿಲ್ಲದೇ ಯಾರಿಗೂ ಬೈಯದೇ, ಕನ್ನಡಿಗರಿಗೆ ನಗುವಿನ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಅಲೋಕ್ .

ಟ್ರೆಂಡಿಂಗ್ ನಲ್ಲಿರೋ ಈ ಹಾಡಿನ ವಿಶೇಷ ಅಂದ್ರೆ ಕನ್ನಡದ ಖ್ಯಾತ ಹಾಸ್ಯನಟರಾದ ದೊಡ್ಡಣ್ಣ , ಉಮೇಶ್ , ಬ್ಯಾಂಕ್ ಜನಾರ್ಧನ್, ಶಿವರಾಂ, ದ್ವಾರಕೀಶ್, ಬಿರಾದಾರ್ ಹೀಗೆ ಸಾಕಷ್ಟು ಕಲಾವಿದರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ತಮ್ಮದೇ ಶೈಲಿಯಲ್ಲಿ ಅಭಿನಯಿಸಿದ್ದಾರೆ. ಎಷ್ಟೋ ನೊಂದ ಮನಸ್ಸುಗಳಿಗೆ ಸ್ಫೂರ್ತಿದಾಯಕವಾಗಿ ಮಾಡ್ರೋ ಈ ಹಾಡು ಇವಾಗ ಎಲ್ಲರ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿರೋದು ಖುಷಿಯ ವಿಚಾರ. ಈ ಅಲೋಕ್ ಎಂಬ ಕನ್ನಡ ದೈತ್ಯ ಪ್ರತಿಭೆಗೆ ನಮ್ ಕಡೆಯಿಂದ ಶುಭ ಹಾರೈಕೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com