ಅಳಿದರು ನೆನಪಲ್ಲಿ ಉಳಿಯುವ ‘ಅಳಿದು ಉಳಿದವರು’

Published on

513 Views

‘ಅಳಿದು ಉಳಿದವರು’ ಚಿತ್ರದ ನಾಯಕ, ನಿರ್ಮಾಪಕ ಅಶುಬೆದ್ರರವರು ಇತ್ತೀಚಿಗೆ ತಮ್ಮ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದರು. ಡಿಸೆಂಬರ್ 6 ರಂದು ತೆರೆಗೆ ಬರಲಿರುವ ‘ಅಳಿದು ಉಳಿದವರು’ ಈಗಾಗಲೇ ಜೋರಾಗಿ ಸದ್ದು ಮಾಡುತ್ತಿದೆ. ಅಶುಬೆದ್ರರವರು ಕ್ರಿಯೇಟಿವಿಟಿಗೆ ಹೆಚ್ಚಿನ ಆದ್ಯತೆ ಕೊಡುವುದರಿಂದ ತಾವೇ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಬೇರೆಯವರು ಸಿನಿಮಾ ನಿರ್ಮಾಣ ಮಾಡಿದರೆ ಕ್ರಿಯೇಟಿವಿಟಿ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಅದರಿಂದ ನಾಯಕನಾಗಿ, ನಿರ್ಮಾಪಕನಾಗಿ ‘ಅಳಿದು ಉಳಿದವರು’ ಮಾಡಿದ್ದೇನೆ. ಎನ್ನುತ್ತಾರೆ ಅಶುಬೆದ್ರ. ಈ ಸಿನಿಮಾದಲ್ಲಿ ಮಾಧ್ಯಮ ಪ್ರತಿನಿಧಿಯಾಗಿ ಕ್ಯಾಮರಾ ಹಿಡಿದುಕೊಂಡು ಕಾರಣಗಳನ್ನು ಹುಡುಕಿಕೊಂಡು ಹೋಗುವ ಪಾತ್ರದಲ್ಲಿ ಅಶುಬೆದ್ರರವರು ಕಾಣಿಸಿಕೊಂಡಿದ್ದಾರೆ.

ದೇವರು, ದೆವ್ವಗಳ‌ ವಿಚಾರ, ನಂಬಿಕೆ – ಮೂಡನಂಬಿಕೆಗಳ ಕುರಿತು ಹೋರಾಟ ನಡೆಸುವಾಗ ಚಾನೆಲ್‌ಗಳು, ಟಿ.ಆರ್.ಪಿ, ಕುಟುಂಬ, ಪ್ರೀತಿ ಇವೆಲ್ಲ ಪ್ರತಿಕ್ರಿಯಿಸುವ ರೀತಿ, ಅದರಿಂದ ಅನುಭವಿಸುವ ಒತ್ತಡ, ನಾಯಕ ಯಾವ ರೀತಿ ಕಷ್ಟಪಡುತ್ತಾನೆ ಎಂಬುದೇ ಕಥಾ ಹಂದರ ಎನ್ನುತ್ತಾರೆ ನಿರ್ಮಾಪಕ ನಟ ಅಶುಬೆದ್ರ. ನಾಯಕಿಯಾಗಿ‌ ಸಂಗೀತ ಭಟ್ ಕಾಣಿಸಿಕೊಂಡಿದ್ದಾರೆ. ‘ಕಹಿ’ ಸಿನಿಮಾ ಖ್ಯಾತಿಯ ಅರವಿಂದ್ ಶಾಸ್ತ್ರಿ ‘ಅಳಿದು ಉಳಿದವರು ನಿರ್ದೇಶನ ಮಾಡಿದ್ದಾರೆ. ‘ಲೂಸಿಯ’, ‘ಯೂ ಟರ್ನ್’ ಖ್ಯಾತಿಯ ಪವನ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಕುಲ್ ಕುಲಕರ್ಣಿ ಕೂಡ ಮಹತ್ವದ ಪಾತ್ರದಲ್ಲಿ ವೊಂದರಲ್ಲಿ ಅಭಿನಯಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದು, ಸುರೇಶ್ ಅರ್ಮುಗಂರವರು ಸಂಕಲನ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com