ಸಾಧನೆಯ ಹಾದಿಯಲ್ಲಿ ‘ಆಕಾಶ್ ಪೂಜಾರಿ ಕದ್ರಿ

Published on

2320 Views

`ಸಾಧನೆಯ ಹಾದಿಯಲ್ಲಿ ‘ಆಕಾಶ್ ಪೂಜಾರಿ ಕದ್ರಿ’

ಮಾಡುವ ಕೆಲಸಕ್ಕೆ ಪ್ರೋತ್ಸಾಹ ಸಿಕ್ಕರೆ ಏನನ್ನೂ ಸಾಧಿಸಬಹುದು ಎನ್ನುವ ಛಲ ಬರುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ ಆಕಾಶ್ ಪೂಜಾರಿ. ಇವರು ಮೂಲತಃ ಮಂಗಳೂರಿನ ಕದ್ರಿಯವರು. ಪ್ರಸ್ತುತ ಕುದ್ರೋಳಿಯ ನಾರಾಯಣ ಗುರು ಕಾಲೇಜಿನಲ್ಲಿ ತೃತೀಯ ವಿಭಾಗದ ಬಿಕಾಂ ವ್ಯಾಸಾಂಗವನ್ನು ಮಾಡುತ್ತಿದ್ದಾರೆ. ಸತೀಶ್ ಹಾಗೂ ಸುಜಾತ ದಂಪತಿಗಳ ಮಗನಾಗಿರುವ ಇವರು ಕಿರುಚಿತ್ರ ನಿರ್ದೇಶಕ ಹಾಗೂ ನಟನಾಗಿದ್ದಾರೆ.

ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ ಇತ್ತು. ಸಿನಿಮಾಗಳನ್ನು ಹೆಚ್ಚು ನೊಡುತಿದ್ದುದು, ಅದರಲ್ಲೂ ವಿಶೇಷವಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾವು ಇವರನ್ನು ಕಿರುಚಿತ್ರದ ನಿರ್ದೇಶನದತ್ತ ಆಕರ್ಷಿಸಿತು. ನಂತರದ ದಿನಗಳಲ್ಲಿ ಇವರು ದಬ್‍ಸ್ಯ್ಮಾಶ್‍ಗಳನ್ನು ಮಾಡಲಾರಂಭಿಸಿದರು. ಇವರ ಪ್ರತಿಭೆಯನ್ನು ಗುರುತಿಸಿದ ಹಿರಿಯರೂ ಸಿನಿಮಾ ನಿರ್ದೇಶನ ಮಾಡಲು ಪ್ರೇರೇಪಿಸಿದರು.

ಯಾವುದೇ ಕ್ಷೇತ್ರದಲ್ಲಿ ಮಿಂಚಬೇಕಾದರೂ ಪ್ರಾರಂಭದಲ್ಲಿ ಜನರ ಬಾಯಿಯಿಂದ ಎಷ್ಟೋ ಬಾರಿ ಎಂತೆಂತಹ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಇವರಿಗೆ ಭರವಸೆ ನಿಡಿದವರು ರಜತ್ ಕದ್ರಿ. ಇವರು ಒಬ್ಬ ರಂಗಭೂಮಿ ಕಲಾವಿದ. ತಾನು ಕಿರುಚಿತ್ರ ನಿರ್ಮಿಸುತ್ತೇನೆಂದಾಗ ಸಹ ನಿರ್ದೇಶಕನಾಗಿ ಜೊತೆಗಿದ್ದವರು ಇವರು. ರಮೇಶ್ ಅಂಚನ್, ಸಂಗೀತ ಕದ್ರಿ ಹಾಗೂ ಹೆತ್ತವರ ಆರ್ಶೀವಾದ ಹಾಗೂ ಸ್ನೇಹಿತರ ಪ್ರೀತಿ, ಪ್ರೋತ್ಸಾಹದಿಂದ ಈ ಹಂತಕ್ಕೆ ತಲುಪಿದ್ದಾರೆ. ಚಿಕ್ಕಪುಟ್ಟ ಕತೆಗಳನ್ನು ಬರಿಯುವುದು, ಚಿತ್ರ ಬಿಡಿಸುವುದು ಹಾಗೂ ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಡುವುದು ಇವರ ಹವ್ಯಾಸವಾಗಿದೆ. ಎಂ.ಎಸ್ ಧೋನಿಯ ಅಭಿಮಾನಿಯಾದ ಇವರಿಗೆ ಕ್ರಿಕೆಟಿಗನಾಗಬೇಕೆಂಬ ಆಸೆಯೂ ಇದೆ.
ಶೀ ನಾರಾಯಣಗುರು ಸಂಘ ಕದ್ರಿಯ ವತಿಯಿಂದ “ಅತೀ ಕಿರಿಯ ವಯಸ್ಸಿನ ನಿರ್ದೇಶಕ” ಎಂದು ಸನ್ಮಾನ ಮಾಡಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಒಂದು ಕಿರುಚಿತ್ರವನ್ನು ಬಿಡುಗಡೆ ಮಾಡಿದರು. ಇದು ಒಂದು ಹಾರರ್ ಚಿತ್ರವಾಗಿದ್ದು, ಈ ಚಿತ್ರವೂ ಸಾಮಾಜಿಕ ಜಾಲತಾಣದಿಂದ ಸಮಸ್ಯೆಯನ್ನು ಎದುರಿಸಿದ ಒಂದು ಹುಡುಗಿಯ ದ್ವೇಷದ ಕಥೆಯನ್ನು ತೋರಿಸಲಾಗಿದೆ. ಈ ಚಿತ್ರವನ್ನು ರಮೇಶ್ ಆಂಚನ್, ಸಂಗೀತಾ, ಭುವನ್ ಹಾಗೂ ಶಿವರಾಮ್ ನೀರ್ಚಾಲ್‍ರವರು ನಿರ್ಮಾಪಣೆ ಮಾಡಿದ್ದಾರೆ. ಇದು ಅಂತರಾಷ್ಟ್ರೀಯ ಕಿರುಚಿತ್ರ ಸಂಭ್ರಮದಲ್ಲಿ ಟಾಪ್ 30ರಲ್ಲಿ 20ನೇ ಸ್ಥಾನವನ್ನು ಗಳಿಸಿಕೊಂಡಿದೆ. ಅದಲ್ಲದೇ ತುಳು ಬಾಷೆಯಲ್ಲಿ ನಿರ್ಮಿಸಿದ ಮೊದಲ ಹಾರರ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರ ಆಸ್ತಿ ಎಂಬ ಚಿತ್ರದ ಮೂಲಕ ದೇಶದ ಮೇಲಿನ ಗೌರವವನ್ನು ತೋರಿಸಿದ್ದಾರೆ.

ಮುಂದಿನ ದಿನಗಳಲ್ಲಿ ತಮ್ಮದೇ ಆದ ಬ್ರದರ್ಸ್ ಕ್ರಿಯೇಷನ್ಸ್ ಎಂಬ ಟೀಮ್‍ನ ಮೂಲಕ ಸಿನಿಮಾ ನಿರ್ಮಾಣ ಮಾಡಬೇಕೆನ್ನುವ ಆಸೆ ಇವರದು.
ಕಿರುಚಿತ್ರ ಎಂದಾಗ ಕಿರುಚಿತ್ರವಾ ಎಂದು ಕೀಳಾಗಿ ನೋಡುತ್ತಾರೆ. ಕಿರುಚಿತ್ರವೂ ಎಷ್ಟೇ ಚಿಕ್ಕದಾಗಿದ್ದರೂ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತದೆ. ಹಾಗೂ ಅಂತಹ ಚಿತ್ರಗಳನ್ನು ತಯಾರಿಸುವುದರಿಂದ ಜನರಿಗೆ ಕಿರುಚಿತ್ರ ನಿರ್ದೇಶಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ, ಎನ್ನುವುದು ಆಕಾಶ್‍ರವರ ಅಭಿಪ್ರಾಯ

ವಿಶ್ವಾಸಗಳೊಂದಿಗೆ
ಜಯಶ್ರೀ.ಎ

ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಪದವಿ ಕಾಲೇಜು
ನೆಹರೂ ನಗರ ಪುತ್ತೂರು ದ.ಕ
574203

More Buzz

Buzzfilm of the dayFull MoviesGalleryHistoryKollywood BuzzShort FilmsTollywood BuzzTrailersVideosWeb Series 14 hours ago

ಪ್ರಭಾಸ್ ನ ಕಲ್ಕಿ ಚಿತ್ರಕ್ಕೆ ಧ್ವನಿ ನೀಡಿದ ಮಹಾನಟಿ ಕೀರ್ತಿ ಸುರೇಶ್!!

BuzzFull MoviesGalleryHistoryTollywood BuzzTrailersVideos 14 hours ago

ಟಾಲಿವುಡ್ ಸ್ಟಾರ್ ಸೂರ್ಯನಿಗೆ ನಾಯಕಿಯಾದ ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ!!

BuzzFull MoviesTollywood BuzzTrailersVideos 15 hours ago

ಡಾರ್ಲಿಂಗ್ ಪ್ರಭಾಸ್ ಜೀವನದಲ್ಲಿ ತುಂಬಾ ವಿಶೇಷವಾದ ವ್ಯಕ್ತಿಯ ಎಂಟ್ರಿ- ಇವರೇ ಆ ವ್ಯಕ್ತಿ

BuzzVideos 1 day ago

ರಾಜಕೀಯಕ್ಕೆ ರಶ್ಮಿಕಾ ಮಂದಣ್ಣ ಎಂಟ್ರಿ???

Buzzfilm of the dayFull MoviesTrailers 1 day ago

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಮ್ಯಾಕ್ಸ್ ಸಿನಿಮಾ ಟ್ರೆಂಡ್ ಆಗಿದ್ದೇಕೆ??

Trailers 4 months ago

UITheMovie – First Look Teaser | Upendra | Lahari Films

Buzz 5 months ago

TOXIC – Rocking Star Yash | Geetu Mohandas | KVN Productions

Buzz 8 months ago

Ghost Official Trailer Starring Dr.Shivarajkumar

Trailers 9 months ago

KADDHA CHITRA – TRAILER | VIJAY RAGHAVENDRA | SUHAS KRISHNA

Trailers 9 months ago

Tatsama Tadbhava Official Trailer | Meghana Raj Sarja | Prajwal Devaraj| Vasuki Vaibhav

Buzz 9 months ago

Sapta Sagaradaache Ello (Side A) – Official Trailer | Rakshit Shetty | Rukmini

Short Films 9 months ago

Bele Mathu Moole Official 4k Full Video

Copyright ©2024 . All Rights Reserved. privacy | terms Whatsapp: 9538193653 Email: hello@flixoye.com