flixOye
Buzz

ಪ್ರಭಾಸ್ ನ ಕಲ್ಕಿ ಚಿತ್ರಕ್ಕೆ ಧ್ವನಿ ನೀಡಿದ ಮಹಾನಟಿ ಕೀರ್ತಿ ಸುರೇಶ್!!

✍️ ಅಮೂಲ್ಯ ಗೌಡ

ಪ್ರಭಾಸ್‌ ರವರ ಮುಂದಿನ ಚಿತ್ರ ಕಲ್ಕಿ2898AD ಚಿತ್ರಕ್ಕೆ ಕೀರ್ತಿ ಸುರೇಶ್‌ ಧ್ವನಿ ನೀಡುತ್ತಿದ್ದಾರೆ. ಕೀರ್ತಿ ಸುರೇಶ್ ಕಲ್ಕಿ2898AD ಸಿನಿಮಾದಲ್ಲಿ ಬುಜ್ಜಿ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆ.

Advertisement

ಮಹಾನಟಿ ಕೀರ್ತಿ ಸುರೇಶ್ ಪ್ರಭಾಸ್‌ ಸಿನಿಮಾಗೆ ಧ್ವನಿ ನೀಡುತ್ತಿರುವುದು ಇಬ್ಬರು ನಟರ ಅಭಿಮಾನಿಗಳಿಗೂ ಖುಷಿ ತಂದಿದೆ.

ಸಲಾರ್‌ ನಂತರ ಪ್ರಭಾಸ್‌ ರವರ ಹೈ ಬಜೆಟ್ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಬಹು ದೊಡ್ಡ ತಾರಾಗಣ ಇದ್ದು, ಸಿನಿಮಾದ ಮೇಲೆ ಅಭಿಮಾನಿಗಳು ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಕಲ್ಕಿ ಚಿತ್ರದಲ್ಲಿ ಪ್ರಭಾಸ್‌ ಜೊತೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ನಾಗ್ ಅಶ್ವಿನ್, ದಿಶಾ ಪಟಾನಿ
ನಟಿಸಿದ್ದಾರೆ ಹಾಗೂ ಈಗಿನ ಸುದ್ದಿಯ ಪ್ರಕಾರ ಮಹಾನಟಿ ಕೀರ್ತಿ ಸುರೇಶ್‌ ಬುಜ್ಜಿ ಪಾತ್ರಕ್ಕೆ ಧ್ವನಿ ನೀಡುತ್ತಿದ್ದಾರೆ.

Advertisement

ಕಲ್ಕಿ ಚಿತ್ರದಲ್ಲಿ ಪ್ರಭಾಸ್ “ಭೈರವ”ನ ಪಾತ್ರದಲ್ಲಿ, ಬಾಲಿವುಡ್‌ ನ ಬಿಗ್‌ ಬಿ ಅಮಿತಾಬ್ ಬಚ್ಚನ್ “ಅಶ್ವತ್ಥಾಮ”ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರವು ಜೂನ್‌ ತಿಂಗಳ 27ನೇ ತಾರೀಕಿನಂದು ತೆರೆಮೇಲೆ ಬರಲಿದೆ.

 

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ flixoye.com ನ್ನು ಫಾಲೋ ಮಾಡಿ.

 

ಸಂಬಂಧಿತ · Related