ಸಪ್ತಪದಿ ತುಳಿದ ‘ಅಗ್ನಿಸಾಕ್ಷಿ’ ಖ್ಯಾತಿಯ ವಿಜಯ್ ಸೂರ್ಯ

Published on

415 Views

ಗುಳಿಕೆನ್ನೆ ಸುಂದರ ‘ಅಗ್ನಿ ಸಾಕ್ಷಿ’ ಧಾರಾವಾಹಿಯಿಂದಲೇ ಎಲ್ಲರ ಮನೆ ಮಾತಾಗಿರುವ ವಿಜಯ್ ಸೂರ್ಯ ಇಂದು ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಅಗ್ನಿ ಸಾಕ್ಷಿ’ ಧಾರಾವಾಹಿಯಲ್ಲಿ ಸಿದ್ಧಾರ್ಥ್ ಎಂದೇ ಖ್ಯಾತಿ ಪಡೆದ ವಿಜಯ್ ಸೂರ್ಯ 23 ವರ್ಷದ ಸಾಪ್ಟ್ ವೇರ್ ಉದ್ಯೋಗಿಯಾಗಿರುವ ಚೈತ್ರಳನ್ನು ವರಿಸಿದ್ದಾರೆ. ಚೈತ್ರ ದೂರದ ಸಂಬಂಧಿಯಾಗಿದ್ದು, ವಿಜಯ್ ಸೂರ್ಯ ತಾಯಿಯೇ ಹುಡುಗಿ ಮನೆಯಲ್ಲಿ ಮದುವೆ ವಿಷಯವನ್ನು ಪ್ರಸ್ತಾಪಿಸಿದ್ದರಂತೆ.

ವಿಜಯ್ ಸೂರ್ಯ ಅರಿಶಿಣ ಶಾಸ್ತ್ರದ ಮತ್ತು ಸ್ನೇಹಿತರೊಂದಿಗೆ ತೆಗೆದಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಧು-ವರರು ಗೋಲ್ಡನ್‌ ಬಣ್ಣದ ಉಡುಗೆ ತೊಟ್ಟು ಮಿಂಚಿದ್ದರು. ಕುಟುಂಬಸ್ಥರು, ಸ್ನೇಹಿತರು ಈ ಶುಭ ಸಮಾರಂಭದಲ್ಲಿ ಭಾಗಿಯಾಗಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com