‘ಕೆಜಿಎಫ್’ ಆಯ್ತು, ಈಗ ‘ಪೈಲ್ವಾನ್’ ಸರದಿ..!!!

Published on

307 Views


‘ಕೆಜಿಎಫ್’ ಚಿತ್ರ ತೆರೆಕಂಡು ದಾಖಲೆ ಮಾಡಿರುವ ಬೆನ್ನಲ್ಲೇ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಪೈಲ್ವಾನ್’ ಕೂಡ ಇನ್ನೊಂದು ದಾಖಲೆ ಮಾಡಲು ಸಜ್ಜಾಗಿದೆ. ಕನ್ನಡ ಚಿತ್ರಕ್ಕೆ ಹೊಸ ಮಾರುಕಟ್ಟೆಯನ್ನು ಸೃಷ್ಟಿ ಮಾಡಿದ ‘ಕೆಜಿಎಫ್’ ಐದು ಭಾಷೆಗಳಲ್ಲಿ ರಿಲೀಸ್ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂತು. ಅದೇ ರೀತಿ ‘ಪೈಲ್ವಾನ್’ ಚಿತ್ರ ಕೂಡ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಎಂಟು ಭಾಷೆಗಳಲ್ಲಿ ಚಿತ್ರವನ್ನು ಟಿವಿಯಲ್ಲಿ ಪ್ರಸಾರ ಮಾಡಲು ಪ್ರತಿಷ್ಠಿತ ಕಂಪೆನಿಯೊಂದು ಬರೋಬ್ಬರಿ 30ಕೋಟಿ ಆಫರ್ ನೀಡಿದೆ ಎಂದು ಚಿತ್ರದ ನಿರ್ದೇಶಕ ಕೃಷ್ಣರವರು ಹೇಳಿದ್ದಾರೆ. ಒಂದು ವೇಳೆ ಇದು ನಿಜವೇ ಆದ್ರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ಬೃಹತ್ ಮೊತ್ತಕ್ಕೆ ಟಿವಿ ಹಕ್ಕು ಮಾರಾಟವಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ‘ಪೈಲ್ವಾನ್’ ಪಾತ್ರವಾಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಮೊತ್ತಕ್ಕೆ ಆಫರ್ ಬರುವ ಸಾಧ್ಯತೆ ಇದೆ. ಅದಕ್ಕೆ ನಾವು‌ ಇನ್ನು ಯಾವುದಕ್ಕೂ ಫಿಕ್ಸ್ ಆಗಿಲ್ಲ ಎಂದು ಹೇಳಿದ್ದಾರೆ ನಿರ್ದೇಶಕ ಕೃಷ್ಣ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com