‘ಇಲ್ಲೊಕ್ಕೆಲ್’ ಮೂಲಕ ಕೋಸ್ಟಲ್ ವುಡ್ಗೆ ಕಾಲಿಟ್ಟ ಅದ್ವಿತಿ ಶೆಟ್ಟಿ

Published on

728 Views

ಮಂಗಳೂರಿನಲ್ಲಿ ಹುಟ್ಟಿ ಬೆಳೆದು, ಮಂಗಳೂರಿನಲ್ಲಿ MBA ಮುಗಿಸಿ, ನಂತರ ಬೆಂಗಳೂರಿನ ಪ್ರೈವೇಟ್‌ ಕಂಪೆನಿಯಲ್ಲಿ HR ಆಗಿ ಕೆಲಸ ಮಾಡುತ್ತಿದ್ದ ಅದ್ವಿತಿ ಶೆಟ್ಟಿ ,ಅಶ್ವಿತಿ ಶೆಟ್ಟಿ ಅನೇಕ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲಿಂದ ಇವರ ಪಯಣ ಸಿನಿಮಾರಂಗದತ್ತ ಸೆಳೆಯಿತು. ‘Mr.Mrs. ರಾಮಾಚಾರಿ’ ಸಿನಿಮಾದಲ್ಲಿ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ ಈ ಟ್ವಿನ್ ಸಿಸ್ಟರ್ ಜೊತೆಯಾಗಿ‌ ನಟಿಸಿದ್ದರು. ಆ ಚಿತ್ರ ಯಶಸ್ವಿಯಾಗುವುದರೊಂದಿಗೆ ಈ ಸಹೋದರಿಯರಿಗೂ ಒಳ್ಳೆ ಹೆಸರು ತಂದು ಕೊಟ್ಟಿತು. ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ಪ್ರಣಯ ರಾಜ ಶ್ರೀನಾಥ್ ಅವರ ಜೊತೆ ‘ ಸುಳಿ’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಅದ್ವಿತಿ, ಅಶ್ವಿತಿ ನಟಿಸಿದ್ದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ ಎರಡು ಕನಸು’ ಧಾರಾವಾಹಿ ಯಲ್ಲಿ ನಾಯಕಿಯಾಗಿ ಅಭಿನಯಿಸಿ‌ ಸೈ ಎನಿಸಿಕೊಂಡಿರುವ ಅದ್ವಿತಿ ಶೆಟ್ಟಿ ಬಿಡುಗಡೆಯ ಹಂತದಲ್ಲಿರುವ ‘ಗಿರಿಗಿಟ್ಲೆ’ ಎಂಬ ಕನ್ನಡ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಕರಾವಳಿ ಬೆಡಗಿಯಾಗಿರುವ ಅದ್ವಿತಿ ಶೆಟ್ಟಿಯ ಬಹುದಿನದ ಕನಸು ಕೋಸ್ಟಲ್ ವುಡ್ ಸಿನಿಮಾದಲ್ಲಿ ಅಭಿನಯಿಸಿಬೇಕೆಂಬ ಆಸೆ ಕೈಗೂಡಿದೆ. ನವ ನಿರ್ದೇಶಕ ಸುರೇಶ್ ಆ್ಯಕ್ಷನ್ ಕಟ್ ಹೇಳುತ್ತಿರುವ ತುಳು ಚಿತ್ರ ‘ಇಲ್ಲೊಕ್ಕೆಲ್’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಅದ್ವಿತಿ ಆರ್ಕಿಟೆಕ್ಟ್ ಪಾತ್ರವನ್ನು ಮಾಡುತ್ತಿದ್ದಾರಂತೆ. ಚಿತ್ರದಲ್ಲಿ ನವೀನ್ ಪಡೀಲ್, ಭೋಜರಾಜ್ ಮುಂತಾದವರ ತಾರಾಗಣ ಚಿತ್ರದಲ್ಲಿದೆ. ಈಗಾಗಲೇ ಚಿತ್ರ ಸೆಟ್ಟೇರಿದ್ದು, ಮೇ ಯಿಂದ ಅದ್ವಿತಿ ಶೆಟ್ಟಿ ಚಿತ್ರದ ಚಿತ್ರೀಕರಣ ದಲ್ಲಿ ಪಾಲ್ಗೊಳ್ಳಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com