ಅಮೇಝಾನ್ ಪ್ರೈಮ್ ವಿಡಿಯೋ ನಲ್ಲಿ ಮುಂದುವರೆದ ಅಧ್ಯಾಯ

Published on

352 Views

ಮಾರ್ಚ 19 ರಂದು ಬಿಡುಗಡೆಯಾದ ಆದಿತ್ಯ ಅಭಿನಯಿಸಿ, ಬಾಲು ಚಂದ್ರಶೇಖರ್ ನಿರ್ದೇಶಿಸಿ, ಕಣಜ ನಿರ್ಮಿಸಿರುವ ಮುಂದುವರೆದ ಅಧ್ಯಾಯ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದು ಕರೊನ ಕಾರಣದಿಂದ ಚಿತ್ರಮಂದಿರಗಳಲ್ಲಿ ಹೆಚ್ಚಿನ ದಿನ ನಿಲ್ಲಲು ಸಾಧ್ಯವಾಗಲಿಲ್ಲ. ಈಗ ಅಮೇಝಾನ್ ಪ್ರೈಮ್ ವಿಡಿಯೋ ನಲ್ಲಿ ಲಭ್ಯವಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಇದು ಒಂದು ಹೊಸರಿತಿಯ ಸಿನೆಮಾ ಆಗಿದ್ದು ಈಗಾಗಲೇ ಸುದ್ದಿಯಾಗಿತ್ತು.ನೋಡದೇ ಇದ್ದವರು ನೋಡಿ ತಂಡಕ್ಕೆ ಹಾರೈಸಿ ಇನ್ನು ಇಂತಹ ಒಳ್ಳೆಯ ಚಿತ್ರಗಳನ್ನು ಮಾಡುವಂತೆ ಪ್ರೋತ್ಸಾಹಿಸಬೇಕು. ಈಗಾಗಲೇ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿದ್ದು ಹೆಚ್ಚಿನ ಜನಗಳನ್ನು ತಲುಪುತ್ತಿರುವ ಖುಷಿ ಚಿತ್ರತಂಡದ್ದು.

ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಅಂತಾರಾಷ್ಟ್ರೀಯ ಓಟಿಟಿ ಗಳಲ್ಲೂ ನೀವು ನೋಡಬಹುದು. ಮತ್ತು ಹಿಂದಿ ತೆಲುಗು ತಮಿಳು ಡಬ್ಬಿಂಗ್ ಕೂಡ ನೆಡೆಯುತ್ತಿದ್ದು ಸದ್ಯದಲ್ಲೇ ಎಲ್ಲಾ ಭಾಷೆಯಲ್ಲೂ ಚಿತ್ರ ಹೊರಬರಲಿದೆ. ಇಂತಹ ಚಿತ್ರರಂಗದ ಪರಿಸ್ಥಿತಿಯಲ್ಲಿ ಇದು ಚಿತ್ರರಂಗಕ್ಕೆ ಒಂದು ಸಂತಸದ ವಿಷಯವೆಂದೇ ಹೇಳಬಹುದು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com