‘ಶುಗರ್ ಫ್ಯಾಕ್ಟರಿ’ ಗೆ ನಾಯಕಿಯಾದ ಅದ್ವಿತಿ ಶೆಟ್ಟಿ

Published on

365 Views

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಅಮೂಲ್ಯ ಸಹೋದರ ದೀಪಕ್ ಅರಸ್ ನಿರ್ದೇಶಿಸುತ್ತಿರುವ ‘ಶುಗರ್ ಫ್ಯಾಕ್ಟರಿ’ ಸಿನಿಮಾದಲ್ಲಿ ನಾಯಕನಾಗಿ ಡಾರ್ಲಿಂಗ್ ‌ಕೃಷ್ಣ ನಟಿಸುತ್ತಿದ್ದು, ಚಿತ್ರದಲ್ಲಿ ಮೂರು ನಾಯಕಿಯರು ಅಭಿನಯಿಸುತ್ತಿದ್ದಾರೆ. ಈಗಾಗಲೇ ಸೋನಾಲ್ ಮಾಂಟೆರೋ ಆಯ್ಕೆಯಾಗಿದ್ದು, ಇತ್ತೀಚಿಗೆ ಜೆಕೆಗೆ ನಾಯಕಿಯಾಗಿ ‘ಐರಾವನ್’ ಚಿತ್ರಕ್ಕೆ ಆಯ್ಕೆಯಾಗಿರುವ, ತಮ್ಮ ಅಮೋಘ ಅಭಿನಯದ ಮೂಲಕ ಮನೆಮಾತಾಗಿರುವ ಅದ್ವಿತಿ ಶೆಟ್ಟಿ ಇನ್ನೊಬ್ಬ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮೂರನೇ ನಾಯಕಿ‌ ಯಾರೆಂಬುದು ಮಾತ್ರ ಇನ್ನು ಸದ್ಯದಲ್ಲೇ ತಿಳಿಯಲಿದೆ. ಜನವರಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಚೇತನ್ ಕುಮಾರ್ ರವರ ಸಂಭಾಷಣೆಯ ‘ಶುಗರ್ ಫ್ಯಾಕ್ಟರಿ’ ಗೆ ಕಬೀರ್ ರಫಿ ಸಂಗೀತ ಸಂಯೋಜನೆ ಮಾಡಲಿದ್ದು, ಸಂತೋಷ್ ರೈ ಪಾತಾಜೆಯವರ ಛಾಯಾಗ್ರಹಣವಿದೆ. ಬಾಲಮಣಿ ಪ್ರೊಡಕ್ಷನ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com