ಆ್ಯಡಂ ಪಾಶಾ ಹಾಗೂ‌ ಡ್ರಗ್ಸ್ ಪೆಡ್ಲರ್ ಅನಿಕಾ ವ್ಯಾಟ್ಸಪ್ ಚಾಟ್….

Published on

343 Views

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿಯಾಗಿರುವ ಆಡಂ ಪಾಶಾ ಹಾಗೂ ಡ್ರಗ್ಸ್ ಪೆಡ್ಲರ್ ಅನಿಕಾರವರ ವಾಟ್ಸಪ್ ಚಾಟ್ ಪತ್ತೆ ಯಾಗಿದ್ದು, ಮತ್ತಷ್ಟು ಸ್ಯಾಂಡಲ್ ವುಡ್ ನಟ-ನಟಿಯರ ಹೆಸರು ಬಯಲಾಗಲಿದೆ ಎನ್ನಲಾಗಿದೆ.

ಆ್ಯಡಂ ಪಾಶಾ ತನ್ನ ಫೋನ್ ನಿಂದ ಅನಿಕಾ ಹಾಗೂ ಡ್ರಗ್ಸ್ ಪೆಡ್ಲರ್ ಗಳ ಜೊತೆಗಿನ ಚಾಟ್ ಲೀಸ್ಟ್ ಡಿಲೀಟ್ ಮಾಡಿರುವ ವಿಚಾರ ತಿಳಿದುಬಂದಿದ್ದು, ಮೊಬೈಲ್ ರಿಟ್ರೈವ್ ಗಾಗಿ ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿತ್ತು. ಅದರಲ್ಲಿ ಬಂಧಿತೆ ಅನಿಕಾ ಸೇರಿದಂತೆ ಇತರೆ ಸ್ನೇಹಿತೆಯರ ವಾಟ್ಸಪ್ ಗ್ರೂಪ್ ಇದ್ದು, ಆ ಗ್ರೂಪಿನಲ್ಲಿ ಡ್ರಗ್ಸ್ ಪಾರ್ಟಿ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ವಾಟ್ಸಪ್ ಚಾಟ್ ನಲ್ಲಿ ಮತ್ತಷ್ಟು ಜನರ ಹೆಸರು ಕೇಳಿಬಂದಿದ್ದು, ಸದ್ಯದಲ್ಲೇ ಅವರನ್ನು ವಿಚಾರಣೆಗೆ ಕರೆಯಲು ಸಿಸಿಬಿ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com