ತೆಲುಗು ನಟ ಶ್ರೀಕಾಂತ್ ರವರು ತಮ್ಮ ಪುತ್ರ ರೋಶನ್ ಮೇಕಾರನ್ನು ತೆರೆಗೆ ತರಲು ಸಿದ್ಧರಾಗಿದ್ದು, 25 ವರ್ಷಗಳ ಹಿಂದೆ ಕೆ.ರಾಘವೇಂದ್ರ ರಾವ್ ನಿರ್ದೇಶನದಲ್ಲಿ ’ಪೆಲ್ಲಿ ಸಂದಡಿ’ ಎಂಬ ಸಿನಿಮಾದಲ್ಲಿ ಶ್ರೀಕಾಂತ್ ನಟಿಸಿದ್ದರು. ಈಗ ಅದೇ ಟೈಟಲ್ ನಲ್ಲಿ ಅದರ ಮುಂದುವರಿದ ಭಾಗವಾಗಿ ಈ ಚಿತ್ರ ಬರಲಿದೆ.
ಕನ್ನಡದ ನಟಿ ಶ್ರೀಲೀಲಾ ಇತ್ತೀಚೆಗೆ ‘ಪೆಲ್ಲಿ ಸಂದಾಡಿ’ ಚಿತ್ರ ತಂಡವನ್ನು ಭೇಟಿಯಾಗಲು ಹೈದರಾಬಾದ್ ಗೆ ಹೋಗಿದ್ದರು. “ನಾನು ಈ ತಿಂಗಳ ಕೊನೆಯಲ್ಲಿ ತೆಲುಗು ಚಿತ್ರತಂಡ ಸೇರಲಿದ್ದೇನೆ. ಈಗ ‘ಬೈಟ್ 2 ಲವ್’ ಸಿನಿಮಾದಲ್ಲಿ ಬಿಜಿಯಾಗಿದ್ದೇನೆ. ‘ಪೆಲ್ಲಿ ಸಂದಡಿ’ ಸಿನಿಮಾ ಮುಗಿಸಿ, ನಂತರ ಧ್ರುವ ಸರ್ಜಾರವರ ‘ದುಬಾರಿ’ ಚಿತ್ರದಲ್ಲಿ ನಟಸಲಿದ್ದೇನೆ” ಎಂದಿದ್ದಾರೆ ಶ್ರೀಲೀಲಾ. ‘ಪೆಲ್ಲಿ ಸಂದಡಿ’ ಚಿತ್ರವನ್ನು ಗೌರಿ ಅವರು ನಿರ್ದೇಶಿಸುತ್ತಿದ್ದು, ರಾಘವೇಂದ್ರ ರಾವ್ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.