‘ಯುವರತ್ನ’ ನ ಕೈಹಿಡಿದ ನಟಿ ಸಾಯೆಷಾ

Published on

701 Views

ನಟ ಸಾರ್ವಭೌಮ ಚಿತ್ರದ ಮೂಲಕ ಸಖತ್ ಸೌಂಡ್ ಮಾಡುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನ್ನಡ ರಾಜ್ಯೋತ್ಸವ ದಿನದಂದು ಟೈಟಲ್ ಲಾಂಚ್ ಮಾಡಿಕೊಂಡ ‘ಯುವರತ್ನ’ ಚಿತ್ರಕ್ಕೆ ನಾಯಕಿ ಯಾರೆಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು.


ಯುವ ರತ್ನ ಚಿತ್ರತಂಡ ಇದೇ ತಿಂಗಳ 14 ರಿಂದ ಶೂಟಿಂಗ್ ಅನ್ನು ಆರಂಭಿಸಲಿದು, ಈಗಾಗಲೇ ಹಿಟ್ ಚಿತ್ರಗಳನ್ನು ನೀಡಿರುವ ಸಂತೋಷ್ ಆನಂದ್ ರಾಮ್ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದು ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿ ಬರಲಿದೆ.


ಈ ಹಿಂದೆ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್‍ಕುಮಾರ್ ರವರ ಜತೆಯಗಿ ‘ರಾಜ್ ಕುಮಾರ್’ ಎಂಬ ಹಿಟ್ ಸಿನಿಮಾವನ್ನು ಕೊಟ್ಟಿದ್ದಾರೆ. ಈ ಜೋಡಿ ‘ಯುವ ರತ್ನ’ ಚಿತ್ರದ ಮೂಲಕ ಪುನಃ ಒಂದಾಗುತ್ತಿದ್ದಾರೆ. ‘ರಾಜಕುಮಾರ’ ದಂತೆಯೇ ಇದು ಕೂಡ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂಬುದು ಸಿನಿ ರಸಿಕರ ಮಾತು. ಇನ್ನು ಈ ಚಿತ್ರಕ್ಕೆ ತಾರಾಗಣ ಇನ್ನೂ ಘೋಷಣೆ ಆಗಿಲ್ಲ. ನಾಯಕಿ ಯಾರೆಂಬ ಕುತೂಹಲಕ್ಕೆ ಮಾತ್ರ ಬ್ರೇಕ್ ಬಿದ್ದಿದೆ. ತೆಲುಗಿನ ಹಲವಾರು ನಾಯಕಿಯರ ಹೆಸರು ಕೇಳಿಬರುತ್ತಿತ್ತು ಇದೀಗ ಪರಭಾಷಾ ನಟಿ ಸಾಯೇಷಾ ಅವರು ಯುವರತ್ನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಸುದ್ದಿ ಇದೆ.

ಇನ್ನು ಸಾಯೆಷಾ ಅವರು ತೆಲುಗಿನ ಅಖಿಲ್ ಹಾಗೂ ತಮಿಳಿನ ಜುಂಗಾ ಸೇರಿದಂತೆ ಇನ್ನೂ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com