ಸೌಂದರ್ಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ..!!

Published on

438 Views

ಕನ್ನಡ, ತಮಿಳು, ತೆಲುಗಿನಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಬೆಳೆದ ನಮ್ಮ ಕನ್ನಡದವರಾದ ನಟಿ ಸೌಂದರ್ಯರವರ ಬದುಕಿನ ಕುರಿತಾದ ಚಿತ್ರ ಮೂಡಿ ಬರಲಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

ವಿಮಾನ ದುರಂತದಲ್ಲಿ ಮರಣವನ್ನಪ್ಪಿದ ಸೌಂದರ್ಯರವರ ಕುರಿತಾದ ಚಿತ್ರದಲ್ಲಿ ಸೌಂದರ್ಯ ಪಾತ್ರವನ್ನು ಸ್ಟಾರ್ ನಟಿ ಸಾಯಿ ಪಲ್ಲವಿಯವರು ಮಾಡಲಿದ್ದಾರೆ ಎಂಬ‌ ಮಾತು‌ ಕೇಳಿ ಬರುತ್ತಿದ್ದು, 90ರ ದಶಕದಲ್ಲಿ ಸೌಂದರ್ಯ ಅವರು ಹಲವು ಭಾಷೆಗಳ ಚಿತ್ರದಲ್ಲಿ ನಟಿಸಿದ್ದು, ಅಷ್ಟೂ ಭಾಷೆಯಲ್ಲೂ ಈ ಬಯೋಪಿಕ್ ಮೂಡಿ ಬರಲಿದೆ.

ತೆಲುಗಿನ ಹೆಸರಾಂತ ನಟಿ ಸಾವಿತ್ರಿ ಅವರ ಬಯೋಪಿಕ್ ನಲ್ಲಿ ಪರಕಾಯ ಪ್ರವೇಶ ಮಾಡಿದ್ದ ನಟಿ ಕೀರ್ತಿ ಸುರೇಶ್ ಗೆ ನ್ಯಾಷನಲ್ ಅವಾರ್ಡ್ ಬಂದಿದ್ದಲ್ಲದೇ, ಇದು ಕೀರ್ತಿ ಸುರೇಶ್ ರವರ ಸಿನಿ‌ ಜರ್ನಿ ಗೆ ದೊಡ್ಡ ಬ್ರೇಕ್ ಕೂಡ ಕೊಟ್ಟಿತ್ತು. ಅದರಂತೆ ಸೌಂದರ್ಯ ಬಯೋಪಿಕ್ ನಲ್ಲಿ ನಟಿಸಲಿರುವ ಸಾಯಿ‌ ಪಲ್ಲವಿಗೂ ನ್ಯಾಷನಲ್‌ ಅವಾರ್ಡ್ ಸಿಗುವ ಸಾಧ್ಯತೆ ಇದೆ. ಒಂದು‌ ವೇಳೆ ಈ ಚಿತ್ರ ಸೆಟ್ಟರಿದ್ದರೆ ಸೌಂದರ್ಯ ಅವರನ್ನು ಮತ್ತೆ ತೆರೆ ಮೇಲೆ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ದೊರೆಯಲಿದೆ. ಸೌಂದರ್ಯ ನಟನೆಯ ಚಿತ್ರಗಳ ತುಣುಕುಗಳು ಈ ಬಯೋಪಿಕ್ ನಲ್ಲಿ ಮೂಡಿ ಬರಲಿದೆ.

ನಟಿ‌ ಸಾಯಿಪಲ್ಲವಿಯವರ ಕೈಯಲ್ಲಿ ನಾಗಚೈತನ್ಯ ಜೊತೆ ಲವ್ ಸ್ಟೋರಿ, ರಾಣ ದಗ್ಗುಬಾಟಿ ಜೊತೆ ವಿರಾಟ ಪರ್ವಂ, ಚಿರಜೀವಿ‌ ಜೊತೆ ವೇದಾಲಮ್ ರಿಮೇಕ್ ಇತ್ಯಾದಿ‌ ಸಿನಿಮಾಗಳು ಇದ್ದು, ತುಂಬಾ ಬಿಜಿಯಾಗಿದ್ದಾರೆ. ಏನೇ ಅದರೂ ಸೌಂದರ್ಯರವರ ಬಯೋಪಿಕ್ ‌ಸಿನಿಮಾಕೋಸ್ಕರ ಅವರ ಅಭಿಮಾನಿ‌ಗಳು ಕಾಯುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com