ನಟಿ ರಾಗಿಣಿ ಮತ್ತೊಂದು‌ ಸಂಕಷ್ಟ..!!!

Published on

350 Views

ಸಿಸಿಬಿ ವಶದಲ್ಲಿರುವ ಡ್ರಗ್ ಮಾಫಿಯಾದ ಆರೋಪದಲ್ಲಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಡ್ರಗ್ಸ್ ದಂಧೆ ಪ್ರಕರಣ ಆರೋಪಕ್ಕೆ ಸಂಬಂಧಿಸಿದಂತೆ ನಟಿ‌ ರಾಗಿಣಿ ಸೇರಿದಂತೆ 5 ಆರೋಪಿಗಳಾದ ಶಿವಪ್ರಕಾಶ್, ವೈಭವ್ ಜೈನ್, ವಿನಯ್ ಕುಮಾರ್, ರಾಹುಲ್ ಆರೋಪಿಗಳ ಜಾಮೀನು ಅರ್ಜಿ ಸೆ.16ಕ್ಕೆ ಮುಂದೂಡುವಂತೆ ಎನ್ ಡಿಪಿಎಸ್ ನ್ಯಾಯಾಲಯ ಆದೇಶ ಹೊರಡಿಸಿದೆ.


ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಂತೆ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದ ರಾಗಿಣಿಗೆ‌ ನ್ಯಾಯಾಲಯ ಜಾಮೀನು ಅರ್ಜಿಯನ್ನು ಸೆ.14 ಮುಂದೂಡಿಕೆ ಮಾಡಿತ್ತು. ಇದೀಗ ಮತ್ತೆ ಜಾಮೀನು‌ ಅರ್ಜಿ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ರಾಗಿಣಿ ಜೈಲು ಸೇರುವುದು ಬಹುತೇಕ ಖಚಿತವಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com