ಜೈಲಿನಿಂದ ಹೊರ ಬಂದ ನಟಿ ರಾಗಿಣಿ

Published on

555 Views

ಡ್ರಗ್ಸ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು‌ ಪಾಲಾಗಿದ ನಟಿ ರಾಗಿಣಿಗೆ ಇಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಕಳೆದ ಐದು ತಿಂಗಳಿನಿಂದ ಜಾಮೀನಿಗಾಗಿ ರಾಗಿಣಿ ಪೋಷಕರು ಸಾಕಷ್ಟು ಪ್ರಯತ್ನ ಪಟ್ಟರೂ, ಕರ್ನಾಟಕ ಹೈಕೋರ್ಟ್ ಎರಡು ಬಾರಿ ಜಾಮೀನು ‌ಅರ್ಜಿಯನ್ನು ತಿರಸ್ಕರಿಸಿತು.

ನಂತರ ರಾಗಿಣಿ ಪೋಷಕರು ‌ಸುಪ್ರೀಂ ಕೋರ್ಟ್ ಮೊರೆ ಹೋದರು. ಅಲ್ಲಿ ಸಲ್ಲಿಸಿದ ‌ಜಾಮೀನು‌ ಅರ್ಜಿ ಮುಂದೂಡಲುಪಟ್ಟಿತ್ತು. ಈ ನಡುವೆ ನಟಿ‌ ಸಂಜನಾ‌ ಗಲ್ರಾನಿ ಅನಾರೋಗ್ಯ ಕಾರಣದಿಂದ ಷರತ್ತು ಬದ್ಧ ಜಾಮೀನು ಪಡೆದು ಹೊರಬಂದಿದ್ದರು. ಈಗ ರಾಗಿಣಿಗೆ ಜಾಮೀನು ಸಿಕ್ಕಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com