ನಟಿ‌ ಮೌನಿರಾಯ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ

Published on

557 Views

‘ಕೆಜಿಎಫ್ ಚಾಪ್ಟರ್ _1’ ಸಿನಿಮಾದ ಹಿಂದಿ ವರ್ಷನ್ ನಲ್ಲಿ ‘ಗಲಿ ಗಲಿ‌ ಮೇ’ ಹಾಡಿಗೆ ಹೆಜ್ಜೆ ಹಾಕಿದ ಬಹುಭಾಷ ನಟಿ ಮೌನಿರಾಯ್ ಈ ಹಾಡಿನ ಮೂಲಕ ಸಖತ್ ಡಿಮ್ಯಾಂಡ್ ಪಡೆದುಕೊಂಡರು. ಈಗ ಮೌನಿರಾಯ್ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ತಮ್ಮ ಪ್ರಿಯಕರ ಉದ್ಯಮಿ‌ ಸೂರಜ್ ನಂಬಿಯಾರ್ ಜೊತೆ‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದ ರೆಸಾರ್ಟ್ ನಲ್ಲಿ ಮದುವೆ‌ ಸಮಾರಂಭ ನೆರವೇರಿದ್ದು, ಪಶ್ಚಿಮ ಬಂಗಾಳದ ಮೌನಿರಾಯ್ ಹಾಗೂ‌ ಕೇರಳ‌ ಮೂಲದ ಸೂರಜ್ ನಂಬಿಯಾರ್ ಅವರ‌ ಎರಡು ಕುಟುಂಬದ‌ ಸಂಪ್ರದಾಯದಂತೆ‌ ವಿವಾಹ ನೆರವೇರಿದೆ.

ಪ್ರೇಕ್ಷಕರು ಮೆಚ್ಚಿದ ‘ಒಂಭತ್ತನೇ ದಿಕ್ಕು’…

ಇವರಿಬ್ಬರ ಮದುವೆ‌ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳ, ಸೆಲೆಬ್ರಿಟಿಗಳ ಮತ್ತು ಸ್ನೇಹಿತರ ಅಭಿನಂದನೆಗಳ ಸುರಿಮಳೆ ಬರುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಅಪ್ತರಿಗಷ್ಟೆ ಆಹ್ವಾನವಿದ್ದು, ಮಂದಿರಾ ಬೇಡಿ, ಅಕ್ಷಾಗೊರಾಡಿಯಾ, ಶಿವಾನಿ ಮಲಿಕ್ ಸಿಂಗ್, ಅರ್ಜುನ್ ಬಿಜಲಾನಿ, ಓಂಕಾರ್‌ ಕಪೂರ್ , ರಾಹುಲ್ ಶೆಟ್ಟಿ ಸೇರಿದಂತೆ ಕೆಲವೇ ಕೆಲವು ಆಪ್ತರು‌ ಮದುವೆಯಲ್ಲಿ ಹಾಜರಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com