ಬಿಎಂಡ್ಬ್ಯೂ ಕಾರಿನ ಒಡತಿಯಾದ ನಟಿ ಕಾರುಣ್ಯ ರಾಮ್

Published on

624 Views

‘ವಜ್ರಕಾಯ’, ‘ಕಿರಗೂರಿನ ಗಯ್ಯಾಳಿಗಳು’, ‘ಮನೆಮಾರಾಟಕ್ಕಿದೆ’ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ಕಾರುಣ್ಯರಾಮ್ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ -4 ರ ಸ್ಪರ್ಧಿಯಾಗಿದ್ದರು. ಸದ್ಯಕ್ಕೆ ರೆಮೋ, ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೊಸದಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಕ್ಕು ವಿತ್ ಕಿರಿಕ್ಕು’ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಾರುಣ್ಯ ರಾಮ್. ಈಗ ತಮ್ಮ ಗುರಿ, ಕನಸಿನಲ್ಲಿ ಒಂದಾದ ಬಿಎಂಡ್ಬ್ಯೂ ಕಾರನ್ನು ಖರೀದಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

“ಇದು ನನ್ನ ಕನಸಾಗಿತ್ತು. ಆಮೇಲೆ ಗುರಿಯಾಗಿತ್ತು. ಈಗ ಸಾಧನೆಯಾಗಿದೆ. ಕನಸುಗಳನ್ನು ಈಡೇರಿಸಿಕೊಳ್ಳಲು ಕೆಲವರು ತುಂಬ ಶ್ರಮ ಪಡುತ್ತಾರೆ. ನನ್ನ ದೊಡ್ಡ ಕನಸುಗಳ ಲಿಸ್ಟ್ ನಲ್ಲಿರುವ ಸಣ್ಣ ಸಾಧನೆ ಇದು ಅಂತ ಹೇಳುವೆ. ಬಾಕಿಯಿರುವ ಕನಸುಗಳನ್ನು ಮುಂದೆ ಈಡೇರಿಸಿಕೊಳ್ಳಬೇಕಿದೆ. ಇದು ನನ್ನ ಮೊದಲ ಲಕ್ಷುರಿ ಕಾರ್ ಸದಾ ನನ್ನನ್ನು ಬೆಂಬಲಿಸುತ್ತಾ, ನನಗೆ ಹಾರೈಸುತ್ತ ಬಂದಿರುವವರೆಲ್ಲರಿಗೂ ಧನ್ಯವಾದ” ಎಂದು ಬರೆದುಕೊಂಡಿದ್ದಾರೆ. ಅಪ್ಪ, ಅಮ್ಮ, ತಂಗಿ ಜೊತೆ ಹೋಗಿ ಕಾರನ್ನು ಖರೀದಿಸಿ, ಕಾರ್ ಜೊತೆ ಡ್ರೈವ್ ಹೋಗಿರುವ ವಿಡಿಯೋ ವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com