ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದ ನಟಿ ಜಯಶ್ರೀ ರಾಮಯ್ಯ…

Published on

364 Views

ಸ್ಯಾಂಡಲ್ವುಡ್ ನಟಿ ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ರವರು “ನನಗೆ ಜೀವನ ಸಾಕಾಗಿದೆ. ಎಲ್ಲರಿಗೂ ಗುಡ್ ಬೈ” ಎಂದು ಪೋಸ್ಟ್ ಹಾಕಿ ಭಾರೀ ಆತಂಕ ಮೂಡಿಸಿದ್ದರು, ಈಗ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದು, ನಾನು ಸೇಫ್ ಆಗಿದ್ದೇನೆ ಎಂದಿದ್ದಾರೆ.

ಜಯಶ್ರೀಯವರು ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ನಿನ್ನೆ ಅವರನ್ನು ಜಯನಗರ ಆಸ್ಪತ್ರೆ ಗೆ ಸೇರಿಸಲಾಗಿತ್ತು. ಇಂದು ಬೆಳಿಗ್ಗೆ ಅವರನ್ನು ಡಿಸ್ ಚಾರ್ಜ್ ಮಾಡಲಾಗಿತ್ತು. ಅಲ್ಲಿಂದ ಹೊರ ಬಂದ ಜಯಶ್ರೀ ಯವರು. ಇನ್ನೊಂದು‌ ಪೋಸ್ಟ್ ಮೂಲಕ ನಾನು ಕ್ಷೇಮವಾಗಿದ್ದೇನೆ ಎಂದಿದ್ದಾರೆ.


ನಟಿ ಜಯಶ್ರೀ “ನನಗೆ ಈ ಜಗತ್ತು ಸಾಕಾಗಿದೆ. ಗುಡ್ ಬೈ” ಎಂದು ಹಾಕಿದ ಪೋಸ್ಟ್ ಗೆ ಕಮೆಂಟ್ ಗಳ‌ ಸುರಿಮಳೆಯೇ ಹರಿದು ಬಂದಿದ್ದು, ಸಾಕಷ್ಟು ಜನರು ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಕಿವಿಮಾತು‌ ಹೇಳಿದ್ದರು. ಇವರು ಯಾರ ಕರೆಯನ್ನು ಸ್ವೀಕರಿಸದ ಕಾರಣ ಇದು ಇನ್ನಷ್ಟು ಆತಂಕವನ್ನು ‌ಉಂಟುಮಾಡಿತ್ತು. ಇದಾದ ಸ್ವಲ್ಪ ಹೊತ್ತಲ್ಲೇ ಜಯಶ್ರೀ ಯವರು ಹಳೆ ಪೋಸ್ಟ್ ನಾ ಡಿಲೀಟ್ ಮಾಡಿ ಹೊಸ ಪೋಸ್ಟ್ ಹಾಕಿದ್ದಾರೆ. ನಾನು‌ ಕ್ಷೇಮವಾಗಿದ್ದೇನೆ ಎಂದು. ಇವರ ಈ ಪೋಸ್ಟ್ ನ್ನು ನೋಡಿದ ಇವರ ಅಭಿಮಾನಿಗಳು ಸ್ನೇಹಿತರು ನಿಟ್ಟುಸಿರು ‌ಬಿಟ್ಟಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com