ಮೈಸೂರಿನಲ್ಲಿ ಚಿತ್ರನಗರಿ ಅಭಿವೃದ್ಧಿ ಕೆಲಸವನ್ನ ಸರ್ಕಾರ ಪ್ರಾರಂಭಿಸಲಿ:- ಸಂಸದ ಪ್ರತಾಪ್ ಸಿಂಹರಿಗೆ ಮನವಿ ಕೊಟ್ಟ ಚಿತ್ರನಟ ವಸಿಷ್ಠ ಸಿಂಹ
ಮೈಸೂರಿಗೆ ಆಗಮಿಸಿದ ಕಂಚಿನ ಕಂಠ ಎಂದೇ ಪ್ರಖ್ಯಾತಿ ಪಡೆದಿರುವ ಗಾಯಕ ಚಿತ್ರನಟ ವಸಿಷ್ಠ ಸಿಂಹ ರವರು ಮತ್ತು ಮೈಸೂರು ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ರವರನ್ನ ಭೇಟಿ ಮಾಡಿ ಸರ್ಕಾರ ಮೈಸೂರಿನಲ್ಲಿ ಚಿತ್ರನಗರಿ ಅಭಿವೃದ್ಧಿ ಕೆಲಸವನ್ನ ಪ್ರಾರಂಭಿಸಲಿ ಎಂದು ಮನವಿ ಮಾಡಿದರು,
ಇದೇ ಸಂಧರ್ಭದಲ್ಲಿ ಚಿತ್ರನಟ ವಸಿಷ್ಠ ಸಿಂಹ ರವರು ಮಾತನಾಡಿ ಮೈಸೂರಿನ ಭವಿಷ್ಯದ ಬೆಳವಣಿಗೆ ದೃಷ್ಟಿಯಲ್ಲಿ ದಶಪಥ ಹೆದ್ದಾರಿ ರಸ್ತೆ ಸಂಸದ ಪ್ರತಾಪ್ ಸಿಂಹ ರವರ ಕಾಳಜಿಯಿಂದ ಅಭಿವೃದ್ಧಿ ಕೆಲಸಗಳು ಆಧುನಿಕತೆಯಿಂದ ನಡೆಯುತ್ತಿರುವುದು ಸಂತಸದ ವಿಚಾರ, ಇದರಿಂದ ಮೈಸೂರಿನಲ್ಲಿ ನೂರಾರು ಕಾರ್ಖಾನೆ ಕೈಗಾರಿಕೋದ್ಯಮ ಸ್ಥಾಪನೆಯಾಗಿ ಲಕ್ಷಾಂತರ ಮಂದಿಗೆ ಕೆಲಸ ಸಿಗುವಂತಾಗುತ್ತದೆ, ಮೈಸೂರಿನಿಂದ ವಿವಿದೆಡೆ ಸಂಪರ್ಕಿಸುವ ರೈಲುಗಳ ಸಂಚಾರ ಮಾಡಿರುವುದು ಸಾಕಷ್ಟು ಮಂದಿಗೆ ಉಪಯೋಗವಾಗಿದೆ, ನಾವು ಹತ್ತಾರು ವರ್ಷದ ಹಿಂದೆ ಕೇವಲ ಮೈಸೂರು ವಿಮಾನ ನಿಲ್ದಾಣವನ್ನ ಮಾತ್ರ ಕಂಡಿದ್ದೇವು ಅಂದರೆ ಇಂದು ಪ್ರತಾಪ್ ಸಿಂಹರವರು ಸಾಮಾನ್ಯವ್ಯಕ್ತಿಯೂ ಸಹ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಸಲು ಹತ್ತಾರು ವಿಮಾನಗಳನ್ನ ಮೈಸೂರು ಸಂಪರ್ಕಕ್ಕೆ ತಂದರು, ವಿಮಾನ ನಿಲ್ದಾಣ ವಿಸ್ತರಿಸಿ ಅಭಿವೃದ್ಧಿ ಮಾಡಿದ್ದಾರೆ, ಅದರಂತೆಯೆ ಮೈಸೂರು ದಸರಾ ಆಗಮಿಸುತ್ತಿದೆ ನಮ್ಮ ಮೈಸೂರು ಕಲಾವಿದರ ತವರೂರು ಕಲಾವಿದರ ದಸರಾಗೆ ಸರ್ಕಾರ ಗಮನವಹಿಸಬೇಕಿದೆ ಮತ್ತು ಚಿತ್ರನಗರಿಯನ್ನ ಮೈಸೂರಿನ ಇಮ್ಮಾವು ಬಳಿ ಸ್ಥಾಪಿಸಲಾಗುತ್ತದೆ ಎಂದು ಸರ್ಕಾರ ಮೂರ್ನಾಲ್ಕು ವರ್ಷದ ಹಿಂದೆಯೇ ಘೋಷಿಸಿದೆ ಹಾಗಾಗಿ ಅಭಿವೃದ್ದಿ ಕೆಲಸಗಳು ಪ್ರಾರಂಭಿಸಲು ಮುಂದಾಗಲಿ ಇದರಿಂದ ನಟನೆ ನಿರ್ದೇಶನ ಮತ್ತು ತಾಂತ್ರಿಕ ವಿಭಾಗ ಸೇರಿದಂತೆ ಕಲಾವಿದರ ಬದುಕಿಗೆ ಕಲಾಶಿಕ್ಷಣ ದುಡಿಮೆಗೆ ಅವಕಾಶ ಸಿಗುತ್ತದೆ ಎಂದು ಮನವಿ ನೀಡಿದರು,
ಇದೇ ಸಂಧರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಚಿತ್ರನಟ ವಸಿಷ್ಠ ಸಿಂಹ, ನಿರ್ದೇಶಕ ಕಾರ್ತಿಕ್, ಅಜಯ್ ಶಾಸ್ತ್ರಿ, ವಿಕ್ರಮ್ ಅಯ್ಯಂಗಾರ್, ಲಿಂಗರಾಜು, ದರ್ಶನ್, ಮುರಳಿಧರ್, ಕೌಶಲ್, ಪ್ರದೀಪ್ ಇನ್ನಿತರರು ಇದ್ದರು