Actor Suriya: ಒಡಹುಟ್ಟಿದವರೇ ವಿಲನ್’ಗಳಾದ್ರು! – ತಮಿಳು ಚಿತ್ರರಂಗದ ಸೂರ್ಯ-ಕಾರ್ತಿಕ್ ಸಹೋದರರ ಹೊಸ ವರಸೆ

Published on

776 Views

ಬಹುತೇಕ ಸಿನಿಮಾಗಳಲ್ಲಿ ಒಡಹುಟ್ಟಿದವರೇ ಅಣ್ಣ-ತಮ್ಮಂದಿರಾಗಿ, ಗೆಳೆಯರಾಗಿ ನಟಿಸುವುದು ಸಾಮಾನ್ಯವಾದರು, ದಾಯಾದಿಗಳಾಗಿ ಅಥವಾ ವಿಲನ್‌ಗಳಾಗಿ ಪಾತ್ರ ನಿಭಾಯಿಸುವುದು ಅಪರೂಪ. ಆದರೆ ಇಂತಹದೊಂದು ಪಾತ್ರದ ಮೂಲಕ ಅಭಿನಯಿಸಲು ಸಜ್ಜಾಗಿದ್ದಾರೆ ಈ ಹಿರೋಗಳು. ಅರೇ ಯಾರಪ್ಪ ಅದು? ಯಾವ ಸಿನಿಮಾ ಅದು? ಅಂತೀರ, ಬನ್ನಿ‌ ಓದೋಣ.

ಹೌದು! ತಮಿಳು ಚಿತ್ರರಂಗದ ಇಬ್ಬರು ಸ್ಟಾರ್ ಸಹೋದರರಾದ ಸೂರ್ಯ ಮತ್ತು ಕಾರ್ತಿಕ್ ಸಿನಿಮಾದಲ್ಲಿ ಪರಸ್ಪರ ಎದುರಾಳಿಗಳಾಗಿ ನಟಿಸುತ್ತಿರುವುದಾಗಿ ಆ ಚಿತ್ರತಂಡವೇ ಖಾತ್ರಿ ಪಡಿಸಿದೆ.

ಸೂರ್ಯ ಹಾಗೂ ಕಾರ್ತಿ ಇಬ್ಬರೂ ಲೋಕೇಶ್ ಕನಗರಾಜ್​ರ ಎಲ್​ಎಸ್​ಯು ಯೂನಿವರ್ಸ್​ನ ಎರಡು ಭಿನ್ನ ಸಿನಿಮಾಗಳ ಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಸೂರ್ಯ ವಿಲನ್ ಆಗಿ ನಟಿಸಿದ್ದರೆ, ಕಾರ್ತಿ ಹೀರೋ ಆಗಿ ನಟಿಸಿದ್ದಾರೆ. ಎಲ್​ಸಿಯುನ ಮುಂದಿನ ಸಿನಿಮಾದಲ್ಲಿ ಇವರಿಬ್ಬರೂ ಹೀರೋ-ವಿಲನ್ ಆಗಿ ನಟಿಸಲಿದ್ದಾರೆ ಎಂಬ ಮಾಹಿತಿ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಇದಕ್ಕೂ ಮುನ್ನ ಬೇರೊಂದು ಸಿನಿಮಾದಲ್ಲಿ ಇವರಿಬ್ಬರು ಹೀರೋ ಮತ್ತು ವಿಲನ್ ಆಗಿ ಮಿಂಚಲಿದ್ದಾರೆ.

Kanaguva

ಸೂರ್ಯ ನಟಿಸುತ್ತಿರುವ ಭಾರಿ ದೊಡ್ಡ ಬಜೆಟ್ ಸಿನಿಮಾ ‘ಕನಗುವ’ ನಲ್ಲಿ ಕಾರ್ತಿ ನಟಿಸಲಿದ್ದಾರಂತೆ. ಸಿನಿಮಾಕ್ಕೆ ಸಂಭಾಷಣೆ ಮತ್ತು ಹಾಡುಗಳನ್ನು ಬರೆಯುತ್ತಿರುವ ವಿವೇಕ್ ಈ ವಿಷಯವನ್ನು ಖಾತ್ರಿ ಪಡಿಸಿದ್ದು, ಸೂರ್ಯ ನಾಯಕನಾಗಿ ಹಾಗೂ ಕಾರ್ತಿ ವಿಲನ್ ಆಗಿ ನಟಿಸಲಿದ್ದಾರೆ‌. ಅಲ್ಲದೇ ಇದೇ ಸಿನಿಮಾದಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್ ಸಹ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಲೋಕೇಶ್ ಕನಗರಾಜ್ ಸಿನಿಮಾದಲ್ಲಿ ಸೂರ್ಯ ರೋಲೆಕ್ಸ್ ಹೆಸರಿನ ವಿಲನ್ ಪಾತ್ರದಲ್ಲಿ ನಟಿಸಿದ್ದರೆ, ಕಾರ್ತಿ ಡೆಲ್ಲಿ ಹೆಸರಿನ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ‘ಕನಗುವ’ ಸಿನಿಮಾನಲ್ಲಿ ಇದು ಉಲ್ಟಾ ಆಗಿದೆ. ಇಲ್ಲಿ ಸೂರ್ಯ ಹೀರೋ, ಕಾರ್ತಿ ವಿಲನ್.

ಕಾರ್ತಿ ಪ್ರಸ್ತುತ ‘ವಾ ವಾತಿಯಾರ್’, ‘ಸರ್ದಾರ್ 2’ ಮತ್ತು ‘ಮಿಯಳಾಗನ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಸೂರ್ಯ ‘ಕನಗುವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಭಾರಿ ದೊಡ್ಡ ಬಜೆಟ್​ನ ಸಿನಿಮಾ ಆಗಿದ್ದು, ಇದೊಂದು ಪೀರಿಯಡ್ ಡ್ರಾಮಾ ಆಗಿದೆ. ಆಧುನಿಕ ಕಾಲ ಮತ್ತು ಶಿಲಾಯುಗದ ಸಮಯದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾಕ್ಕೆ ಜ್ಞಾನವೇಲು ಬಂಡವಾಳ ಹೂಡಿದ್ದು, ಶಿವ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ದಿಶಾ ಪಟಾನಿ ನಟಿಸುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com