ನಟ ರಿಷಿ ಕೈಮಗ್ಗ ಮಾಡಲು‌ ಮುಂದಾಗಿದ್ದಾರೆ

Published on

499 Views

ನಟ ರಿಷಿ ತಮ್ಮ ಮುಂಬರುವ ಸಿನಿಮಾದಲ್ಲಿ ನೇಯ್ಗೆ ಮಾಡಲು ಮುಂದಾಗಿದ್ದಾರೆ. ಮೋಹನ್ ಸಿಂಗ್ ನಿರ್ದೇಶಿಸುತ್ತಿರುವ ಸಿನಿಮಾದ ಟೈಟಲ್ ಇನ್ನು ರಿವೀಲ್ ಆಗಿಲ್ಲ.

ಅದರೆ ನಟ ರಿಷಿಯ ಪಾತ್ರ ಇಲ್ಲಿ ರಿವೀಲ್ ಆಗಿದೆ. ತಮ್ಮ ಪಾತ್ರದ ಸಂಶೋಧನೆಯಲ್ಲಿ ಬ್ಯುಸಿಯಾಗಿದ್ದ ರಿಷಿ “ನಾನು ಅನೇಕ ತಲೆಮಾರುಗಳಿಂದ ನೇಯ್ಗೆ ಮಾಡುವ ಕುಟುಂಬದಿಂದ ಬಂದ ನೇಕಾರನ ಪಾತ್ರವನ್ನು ಮಾಡುತ್ತಿದ್ದೇನೆ. ಇಂದು ಕೈಮಗ್ಗ ವೇಗವಾಗಿ ಮರೆಯಾಗುತ್ತಿದೆ. ಯಂತ್ರ ನಿರ್ಮಿತ ಸೀರೆಗಳು ಹೆಚ್ಚಾಗಿವೆ. ಮರದ ಮಗ್ಗಗಳನ್ನು ಜನ ಮರೆತುಹೋಗಿದ್ದಾರೆ.

ನಾನು ಕೈಮಗ್ಗದ ಬಗ್ಗೆ ಆಕರ್ಷಿತನಾಗಿ ಮತ್ತು ಆಸಕ್ತಿಯಿಂದ ರಾಮನಗರದಲ್ಲಿರುವ ಘಟಕ ಒಂದರಲ್ಲಿ ಕೈ ನೇಯ್ಗೆಯನ್ನು ಕಲಿಯಲು ನಿರ್ಧರಿಸಿದ್ದೇನೆ” ಎಂದರು. ಇಂಗ್ಲೇಂಡಿನ ರಾಜಕುಮಾರಿಯ ಸೀರೆ ನೇಯ್ಗೆ ಮಾಡಲು ಕರ್ನಾಟಕದ ಕುಟುಂಬವು ಹೇಗೆ ಆದೇಶ ಪಡೆಯುತ್ತದೆ. ಎಂಬುದರ ಕುರಿತು ಈ ಚಿತ್ರಕಥೆ. ಇಲ್ಲಿ ಪ್ರೇಮಕಥೆಯನ್ನು ಕಥಾವಸ್ತುವಿನಲ್ಲಿ ನೇಯಲಾಗುತ್ತದೆ ಎನ್ನುತ್ತಾರೆ ನಟ ರಿಷಿ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಫೆಭ್ರವರಿಯಲ್ಲಿ ತೆರೆಗೆ ಬರುವ ಸಿದ್ಧತೆ ನಡೆಸಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com